ದಿನದ ಅಪರಾಧಗಳ ಪಕ್ಷನೋಟ 20ನೇ ಜಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 19.07.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಜೂಜಾಟ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.    ದಿನಾಂಕ 19.07.2020 ರಂದು ಸಂಜೆ ಸುಮಾರು 5.30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆರೆಕೋಡಿ ಗ್ರಾಮದ ಕೆರೆಯ ಅಂಗಳದಲ್ಲಿ ಆರೋಪಿಗಳಾದ ಬಾಬು, ರಾಜೇಂದ್ರ, ಮುನಿರತ್ನಂ, ನಾಗರಾಜ್, ಗೋವಿಂದ ರಾಜು, ಸುಬ್ರಮಣಿ, ಭಾರತ್ ರವರುಗಳು ಯಾವುದೇ ಪರವಾನಿಗೆ ಇಲ್ಲದೇ ಕೈಗಳಲ್ಲಿ ಇಸ್ಪೀಟ್ ಎಲೆಗಳನ್ನಿಟ್ಟುಕೊಂಡು, ಅಂದರ್-ಬಾಹರ್ ಎಂದು ಹೇಳುತ್ತಾ, ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ.ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿಯವರುಗಳು ದಾಳಿ ಮಾಡಿ ಸ್ಥಳದಲ್ಲಿ ಜೂಜಾಟವಾಡಲು ಉಪಯೋಗಿಸುತ್ತಿದ್ದ 52 ಇಸ್ಪೀಟ್ ಎಲೆಗಳು, ಪಣವಾಗಿಟ್ಟಿದ್ದ ನಗದು ಹಣ 10,200/- ರೂಗಳನ್ನು ಸಂಜೆ 5.30 ಗಂಟೆಯಿಂದ 6.15 ಗಂಟೆವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಕಾನೂನು ರೀತಿ ಕ್ರಮ ಜರುಗಿಸಿರುತ್ತೆ.

– ಹಲ್ಲೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ವೆಂಕಟಸ್ವಾಮಿ, ದೊಡ್ರಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ:18.07.2020 ರಂದು ಸಂಜೆ ಸುಮಾರು 7.00 ಗಂಟೆಯಲ್ಲಿ ಬಡಮಾಕನಹಳ್ಳಿಗೆ ಹೋಗಲು ತನ್ನ ದ್ವಿಚಕ್ರ ವಾಹನದಲ್ಲಿ ಹುನ್ಕುಂದ ಸರ್ಕಾರಿ ಶಾಲೆಯ ಬಳಿ ಹೋಗುತ್ತಿದ್ದಾಗ ಹುನ್ಕುಂದ ಗ್ರಾಮದ ಆರೋಪಿ ನವೀನ್ ಎಂಬುವರು ಪಿರ್ಯಾದಿಯನ್ನು ಕುರಿತು ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳಿದ್ದು, ಆಗ ಪಿರ್ಯಾದಿಯು ಬಡಮಾಕನಹಳ್ಳಿಗೆ ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ಆಗ ಪಿರ್ಯಾದಿಯನ್ನು ಹುನ್ಕುಂದ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗವಿರುವ ನೀಲಗಿರಿ ತೋಪಿನ ಬಳಿ ಕರೆದುಕೊಂಡು ಹೋಗುತ್ತಿದ್ದಂತೆಯೇ ಅಲ್ಲಿ ಆರೋಪಿಗಳಾದ ಜಯರಾಮಪ್ಪ, ಗೋವಿಂದಪ್ಪ, ಹೇಮಂತ್ ರವರುಗಳಿದ್ದು, ಆರೋಪಿಗಳು ಎಲ್ಲಾರು ಸೇರಿ ಪಿರ್ಯಾದಿಗೆ ಹೊಡೆದು ರಕ್ತಗಾಯಪಡಿಸಿ, ಕೆಟ್ಟಮಾತುಗಳಿಂದ ಬೈದು,  ಸಾಯಿಸದೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಅಕ್ರಮ ಮದ್ಯ ಮಾರಾಟ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 19.07.2020 ರಂದು ಈ ಕೇಸಿನ ಪಿರ್ಯಾದಿದಾರರು ಶ್ರೀ. ರಾಮದಾಸು, ಎ.ಎಸ್‌.ಐ ಮಾರಕುಪ್ಪಂ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 1.00 ಗಂಟೆಯಲ್ಲಿ ಚಿನ್ನಾಗನಹಳ್ಳಿ ಗ್ರಾಮದದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಆರೋಪಿ ಮುನಿರತ್ನಂ ವಾಸ  ಚಿನ್ನಾಗನಹಳ್ಳಿ ರವರು ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಡುತ್ತಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಪರಾರಿಯಾಗಿದ್ದು, ಮದ್ಯದ ಪಾಕೇಟ್‌ಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತು ಪಡಿಸಿಕೊಂಡಿರುತ್ತೆ.

– ಅಸ್ವಾಭಾವಿಕ ಮರಣ ಪ್ರಕರಣ : 03

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02 ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಅಫ್ಜಲ್ ಬಿಜಲಿ ಬಿನ್ ಜಬ್ಬರ್‌ ಖಾನ್‌, ಸ್ವರ್ಣನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್  ರವರ ಮಗನಾದ ಇಬನೈಆಲಿ ಬಿಜಲಿ, 20 ವರ್ಷ ರವರಿಗೆ ಈಗ್ಗೆ 2 ವರ್ಷಗಳಿಂದ ಮೂಗಿನಲ್ಲಿ ಗುಳ್ಳೆ ಬಂದಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಸಾದಾರಣವಾಗಿ ಚೇತರಿಸಿಕೊಂಡಿದ್ದು, ದಿನಾಂಕ. 19.07.2020 ರಂದು ಮಧ್ಯಾಹ್ನ 1.00 ಗಂಟೆಯಲ್ಲಿ ಇಬನೈ ಆಲಿ ಬಿಜಲಿ ರವರಿಗೆ ಅತಿಯಾಗಿ ಮೂಗಿನ ನೋವಿನ ಬಾದೆಯಿಂದಲೋ ಅಥವಾ ಹೃದಯಘಾತದಿಂದಲೋ ಅಥವಾ ಹೆಚ್ಚಿಗೆ ಶೀತದಿಂದಲೋ ಮೃತಪಟ್ಟಿರುತ್ತಾನೆ.

ದೂರುದಾರರಾದ ಶ್ರೀ. ನಾಗರಾ‌ಜ್‌ ಬಿನ್ ವೆಂಕಟಪ್ಪ ನಾಯ್ಡು, ಸ್ವರ್ಣಕುಪ್ಪಂ, ಕೆ.ಜಿ.ಎಫ್ ರವರ ತಂದೆ ವೆಂಕಟಪ್ಪನಾಯ್ಡು, 70 ವರ್ಷ ರವರಿಗೆ ಕಣ್ಣು ಸರಿಯಾಗಿ ಕಾಣಿಸದೆ ಇದ್ದು,  ದಿನಾಂಕ. 19.07.2020 ರಂದು ಸಂಜೆ 4-30 ಗಂಟೆಗೆ  ವೆಂಕಟಪ್ಪನಾಯ್ಡು ರವರಿಗೆ ಎದೆನೋವು ಜಾಸ್ತಿಯಾದ್ದರಿಂದ ಅವರ ಕೊಠಡಿಯಲ್ಲಿದ್ದ ಯಾವುದೋ ಔಷದಿಯನ್ನು ಕುಡಿದ್ದರಿಂದ ಅಸ್ವಸ್ಥರಾಗಿದ್ದು, ಚಿಕಿತ್ಸೆ ಸಲುವಾಗಿ ಕೋಲಾರದ ಜಾಲಪ್ಪ ಆಸ್ವತ್ರೆಗೆ ಹೋಗುತ್ತಿದ್ದಾಗ, ವೆಂಕಟಪ್ಪನಾಯ್ಡುರವರು ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಜಯಲಕ್ಷ್ಮಿ, ಎನ್.ಜಿ.ಹುಲ್ಕೂರ್, ಬೇತಮಂಗಲ ರವರ ಗಂಡ  ಶ್ರೀನಾಥ್, ೪೦ ವರ್ಷ ರವರಿಗೆ ಮದ್ಯಪಾನ ಸೇವನೆ ಮಾಡುವ ಅಭ್ಯಾಸ ವಿದ್ದು, ದಿನಾಂಕ- 18.07.2020 ರಂದು ರಾತ್ರಿ ಯಾವುದೋ ವೇಳೆಯಲ್ಲಿ ತನ್ನ ಗಂಡ ಶ್ರೀನಾಥ್ ರವರು ಹಗ್ಗದಿಂದ ಪ್ಯಾನ್ ಗೆ ನೇಣು ಬಿಗಿದು ಕೊಂಡು ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *