ಕೆ.ಜಿ.ಎಫ್: ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೋಡುಗೆ

ಕೆ.ಜಿ.ಎಫ್: ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೋಡುಗೆ

ಕೆಜಿಎಫ್., ಮೇ. 31 :

ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಹಾರ್ಥಿಕ ಬಿಳ್ಕೋಡುಗೆ ಕಾರ್ಯಕ್ರಮವು ಮೇ 31 ರಂದು ಕೋವಿಡ್ ನಿಯಮಾವಳಿಯಂತೆ ಅತ್ಯಂತ ಸರಳವಾದ ರೀತಿಯಲ್ಲಿ ನಡೆಯಿತು.

ಡಿ.ಎ.ಆರ್.ನ ಎಆರ್‌ಎಸ್‌ಐ ಮುರುಗಚಂದ್ರ ಮತ್ತು ಕಾಮಸಮುದ್ರ ಠಾಣೆಯ ಎಎಸ್‌ಐ ದೆಬ್ಬನಹಳ್ಳಿ ಶ್ರೀನಿವಾಸ ಅವರುಗಳು ಮೇ.31 ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರುಗಳಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ, ಹಾರ್ಥಿಕ ಬಿಳ್ಕೋಡುಗೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಅಧ್ಯಕ್ಷತೆ ವಹಿಸಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ವಿಶ್ರಾಂತಿ ಜೀವನಕ್ಕೆ ಶುಭ ಕೋರಿದರು.

ನಿವೃತ್ತರಾದ ಎಆರ್‌ಎಸ್‌ಐ ಮುರುಗಚಂದ್ರ, ಎಎಸ್‌ಐ ದೆಬ್ಬನಹಳ್ಳಿ ಶ್ರೀನಿವಾಸ್ ಅವರುಗಳನ್ನು ಪ್ರತ್ಯೇಕವಾಗಿ ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಬಿ.ಕೆ.ಉಮೇಶ್, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಆರ್‌ಪಿಐ ವಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *