ದಿನದ ಅಪರಾಧಗಳ ಪಕ್ಷಿನೋಟ 08 ನೇ ನವೆಂಬರ್‌ 2017

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 07.11.2017 ರಂದು  ಸಂಜೆ 5.00  ಗಂಟೆಯಿಂದ ದಿನಾಂಕ: 08.11.2017  ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.


ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 07.11.2017 ರಂದು ದೂರುದಾರರಾದ ಶ್ರೀಮತಿ. ರತ್ನಮ್ಮ ಕೋಂ ರಾಮಮೂರ್ತಿ, ಶಾಂತಿ ನಗರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ. ದಿನಾಂಕ 12.03.2006 ರಲ್ಲಿ  ದೂರುದಾರರು ರಾಮಮೂರ್ತಿ ರವರನ್ನು ಮದುವೆ ಮಾಡಿಕೊಂಡಿದ್ದು, ಮದುವೆಯಾದ ಎರಡು ವರ್ಷಗಳ ಕಾಲ ಗಂಡ ಹೆಂಡತಿ ಇಬ್ಬರೂ ಅನ್ಯೊನ್ಯವಾಗಿದ್ದು, ನಂತರ ಆರೋಪಿ ರಾಮಮೂರ್ತಿ ಪ್ರತಿ ದಿನ ಕುಡಿದು ಮನೆಗೆ ಬಂದು ಮಾನಸಿಕವಾಗಿ ಮತ್ತು ದೈಹಿಕವಾಗಿ  ದೂರುದಾರರಿಗೆ ಕಿರುಕುಳವನ್ನು ನೀಡುತ್ತಿದ್ದು  ದೂರುದಾರರು ದಿನಾಂಕ 31-10-2017 ರಂದು ಬಂಗಾರಪೇಟೆ ಪಾರ್ಕ್ ಹಿಂಭಾಗ ರಸ್ತೆಯಲ್ಲಿ ಹೋಗುತ್ತಿದ್ದಾಗ ಆರೋಪಿ ಬಂದು ಕೈಯಲ್ಲಿದ್ದ ಮೊಬೈಲ್ ಮತ್ತು ಪರ್ಸ್ ನ್ನು ಕಿತ್ತುಕೊಂಡು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ರಕ್ತ ಗಾಯಪಡಿಸಿರುತ್ತಾರೆ.

 

 

 

Leave a Reply

Your email address will not be published. Required fields are marked *