ದಿನದ ಅಪರಾಧಗಳ ಪಕ್ಷಿನೋಟ 13 ನೇ ನವೆಂಬರ್‌ 2018

– ರಸ್ತೆ ಅಪಘಾತಗಳು :‍ 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ, ಮಡಿವಾಳ ಗ್ರಾಮ, ಮಾಲೂರು ತಾಲ್ಲೂಕು ರವರು ನೀಡಿದ ದೂರಿನಲ್ಲಿ,  ದಿನಾಂಕ 11.11.2018 ರಂದು ಸಂಜೆ 6.30 ಗಂಟೆಯಲ್ಲಿ ಸಿ.ಎಂ ಹನುಮಪ್ಪ, ಚಿಕ್ಕ ಅಂಕಂಡಹಳ್ಳಿ ಗ್ರಾಮ ರವರು   ಕುಪ್ಪನಹಳ್ಳಿ ಗೇಟ್ ನಲ್ಲಿ ಬಸ್  ಇಳಿದು,ಚಿಕ್ಕ ಅಂಕಂಡಹಳ್ಳಿ ಗ್ರಾಮಕ್ಕೆ  ನಡೆದುಕೊಂಡು ಹೋಗುತ್ತಿದ್ದಾಗ, ಕೋಲಾರ ಕಡೆಯಿಂದ ಬಂಗಾರಪೇಟೆ ಕಡೆಗೆ ಹೋಗಲು ಟಿವಿಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಎಕ್ಸ್-3312 ರ ಸವಾರ ಸದರಿ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಸಿ.ಎಂ ಹನುಮಪ್ಪ ರವರಿಗೆ ಡಿಕ್ಕಿ ಹೊಡೆದ ಪರಿಣಾಮ  ರಕ್ತಗಾಯವಾಗಿರುತ್ತೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಿವಕುಮಾರ್‌‌ ಬಿನ್ ಪಚ್ಚಿಯಪ್ಪನ್, ಚಿನ್ನಮೊತೂರು ಗ್ರಾಮ, ವೆಲ್ಲೂರು ಜಿಲ್ಲೆ, ತಮಿಳುನಾಡು ರವರು ಬೇತಮಂಗಲ ವಿ.ಕೋಟೆ ರಸ್ತೆ ರಾಮಸಾಗರ ಕ್ರಾಸ್ ಬಳಿ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಂ TN 23-N-2443 ವಾಹನವನ್ನು ದಿನಾಂಕ 11-11-2018 ರಂದು ಮದ್ಯಾಹ್ನ 1.15 ಗಂಟೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಎದರು ಕಡೆಯಿಂದ ದ್ವಿ ಚಕ್ರ ವಾಹನ ಸಂಖ್ಯೆ KA-08-TCNT/MC/02/17-18 ಅನ್ನು ಅದರ ಸವಾರ ಬೆಟ್ಗೂರು ಗ್ರಾಮದ ವಾಸಿ ಅನಿಲ್‌ ಹಿಂಬದಿಯಲ್ಲಿ ಮಧು ರವರನ್ನು ಕುಳ್ಳರಿಸಿಕೊಂಡು ಬಲಬಾಗದ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗೂರುಕತೆ ಯಿಂದ

ಅಸ್ವಾಭಾವಿಕ ಮರಣ : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲತಾ, ಪೆದ್ದಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ರವಿಚಂದ್ರ, 45 ವರ್ಷ ರವರಿಗೆ ವಿಪರೀತ ಮದ್ಯಪಾನದ ಚಟವಿದ್ದು ಕುಡಿತದ ಅಮಲಿನಲ್ಲಿ ಸರಿಯಾಗಿ ಊಟ ಮಾಡದೆ 2-3 ತಿಂಗಳಿನಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ದಿನಾಂಕ 11-11-2018 ರಂದು ರಾತ್ರಿ ಜೀವನದಲ್ಲಿ ಜಿಗುಪ್ಸೆಹೊಂದಿ ಮನೆಯಲ್ಲಿರುವ ಮೇಲ್ಚಾವಣಿಯ ಕಬ್ಬಿಣದ ಕೊಂಡಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರತ್ನಪ್ಪ ಬಿನ್ ಮುನಿವೆಂಕಟಪ್ಪ, ಮೇಲುಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಹೆಂಡತಿ ಶ್ರೀಮತಿ ಭೂಲಕ್ಷ್ಮಮ್ಮ, 35  ವರ್ಷ ರವರು  ಗ್ರಾಮದ  ಸ್ತ್ರಿಶಕ್ತಿ ಸಂಘದಲ್ಲಿ 2,00,000/- ರೂ ಸಾಲ ಮಾಡಿಕೊಂಡಿದ್ದು, ದೂರುದಾರರಿಗೆ ಮತ್ತು ಭೂಲಕ್ಷ್ಮಮ್ಮ ರವರಿಗೆ ಸರಿಯಾದ ಕೆಲಸ ಇಲ್ಲದೇ ಆರ್ಥಿಕವಾಗಿ ತುಂಭ ತೊಂದರೆ ಅನುಭವಿಸುತ್ತಿದ್ದು, ಪಡೆದಿದ್ದ ಸಾಲವನ್ನು ಸರಿಯಾದ ಪಾವತಿ ಮಾಡಲು ಸಾಧ್ಯವಾಗದೆ ಭೂಲಕ್ಷ್ಮಮ್ಮ ರವರು ಮನನೊಂದು ದಿನಾಂಕ 09.11.2018 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಾವುದೋ ವಿಷವನ್ನು ಕುಡಿದು ಒದ್ದಾಡುತ್ತಿದ್ದವರನ್ನು ಚಿಕಿತ್ಸೆಗಾಗಿ ಆರ್‌.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು,  ದಿನಾಂಕ 12.11.2018 ರಂದು ಮದ್ಯಾಹ್ನ  2.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಭೂ ಲಕ್ಷ್ಮಮ್ಮ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *