ಸಬ್‌ಇನ್ಸ್‌ಪೆಕ್ಟರ್ ನೌಕರಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕದ ಅವಧಿ ವಿಸ್ತರಣೆ

ಪತ್ರಿಕಾ ಪ್ರಕಟಣೆ

ಸಬ್‌ಇನ್ಸ್‌ಪೆಕ್ಟರ್ ನೌಕರಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕದ ಅವಧಿ ವಿಸ್ತರಣೆ

ಜೂನ್. 25 :

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ವಿವಿಧ ವೃಂದಗಳ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ಅವಧಿಯನ್ನು ಜುಲೈ 18ರ ತನಕ ವಿಸ್ತರಿಸಲಾಗಿದೆ.

ಯಾವುದಾದರೂ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಅಥವಾ ತತ್ಸಮಾನ ವಿದ್ಯಾರ್ಹತೆ ತೇರ್ಗಡೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಆರ್.ಎಸ್.ಐ. (ಸಿಎಆರ್, ಡಿಎಆರ್), ಸ್ಪೆ. ಆರ್.ಎಸ್.ಐ. (ಕೆ.ಎಸ್.ಆರ್.ಪಿ), ಎಸ್.ಐ., (ಕೆ.ಎಸ್.ಐ.ಎಸ್.ಎಫ್) ಅಥವಾ ಪಿಎಸ್‌ಐ (ವೈರ್‌ಲೆಸ್) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಜುಲೈ 18ರ ಒಳಗಾಗಿ ಸಲ್ಲಿಸಬಹುದಾಗಿದ್ದು, ಈ ಹಿಂದೆ ಜೂನ್ 26ರ ವರೆಗೆ ಇದ್ದಂತಹ ಕೊನೆಯ ದಿನವನ್ನು ಜುಲೈ 18ಕ್ಕೆ ಮರು ನಿಗಧಿಪಡಿಸಲಾಗಿದೆ.

2020-21ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವೃಂದದ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ದಿನಾಂಕಗಳನ್ನು ಮಾತ್ರ ವಿಸ್ತರಿಸಲಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಹಾಗೂ ನೇಮಕಾತಿಯ ಅಧಿಸೂಚನೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ http://www.ksp.gov.in ಅನ್ನು ಅವಲೋಕಿಸಬಹುದು.

Leave a Reply

Your email address will not be published. Required fields are marked *