ಪತ್ರಿಕಾ ಪ್ರಕಟಣೆ 04.08.2020 -ಕೆಜಿಎಫ್: ನೂತನ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅಧಿಕಾರ ಸ್ವೀಕಾರ

ಕೆಜಿಎಫ್: ನೂತನ ಎಸ್ಪಿ ಇಲಕ್ಕಿಯಾ ಕರುಣಾಕರನ್ ಅಧಿಕಾರ ಸ್ವೀಕಾರ

ಕೆಜಿಎಫ್., ಆ. ೪ :

ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಇಲಕ್ಕಿಯಾ ಕರುಣಾಗರನ್ ಅವರು ಮಂಗಳವಾರದಂದು ಸಂಜೆ ಅಧಿಕಾರ ವಹಿಸಿಕೊಂಡರು.
ಇಲ್ಲಿಯವರೆಗೆ ಕೆಜಿಎಫ್ ಎಸ್‌ಪಿ ಪ್ರಭಾರದಲ್ಲಿದ್ದ ಹಾಗೂ ಪ್ರಸ್ತುತ ಬೆಂಗಳೂರು ಸಿಎಆರ್ ಡಿಸಿಪಿ ಆಗಿ ವರ್ಗವಾಗಿರುವ ಎಸ್.ಪಿ. ಎಂ.ಎಸ್. ಮೊಹಮ್ಮದ್ ಸುಜೀತ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ನೂತನ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅವರು ಈ ಹಿಂದೆ ಬೆಂಗಳೂರು ಮಹಾನಗರದ ವಿವಿಐಪಿ ಡಿಸಿಪಿ ಆಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಇಲಕ್ಕಿಯಾ ಕರುಣಾಗರನ್ ಅವರು ಸಾಮಾನ್ಯ ನಾಗರೀಕರಿಗೆ ಅನ್ಯಾಯವಾಗದ ರೀತಿಯಲ್ಲಿ, ನಿಸ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದರು. ಜನಸಾಮಾನ್ಯರು ತಂತಮ್ಮ ಸಮಸ್ಯೆಗಳ ಕುರಿತು ತಮ್ಮನ್ನು ಯಾವುದೇ ಸಮಯದಲ್ಲೂ ಭೇಟಿಯಾಗಿ, ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದೆಂದರು.
ಸಶಸ್ತ್ರ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಮಂಜುನಾಥ ಮತ್ತು ಸಿಬ್ಬಂದಿಗಳು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನೂತನ ಎಸ್‌ಪಿ ರವರಿಗೆ ಗೌರವ ರಕ್ಷೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಬಿ.ಕೆ. ಉಮೇಶ, ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ನೂತನ ಎಸ್‌ಪಿ ಇಲಕ್ಕಿಯಾ ಕರುಣಾಕರನ್ ಅವರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *