ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೋಡುಗೆ

ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಬಿಳ್ಕೋಡುಗೆ
ಸೇವೆಯಲ್ಲಿರುವಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.

ಅವರು ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಡಿಎಆರ್ ಮುಖ್ಯಪೇದೆ ಎನ್.ರವಿಕುಮಾರ್ ಮತ್ತು ಮಾರಿಕುಪ್ಪಂ ಠಾಣೆಯ ಮುಖ್ಯಪೇದೆ ಸಿ.ವಿ.ರವೀಂದ್ರನಾಥರೆಡ್ಡಿ ಅವರುಗಳು ಫೆ.೨೮ ರಂದು ನಿವೃತ್ತಿ ಹೊಂದಲಿರುವ ಸಂದರ್ಭದಲ್ಲಿ ಅವರುಗಳಿಗೆ ಏರ್ಪಡಿಸಿದ್ದ, ಹಾರ್ಥಿಕ ಬಿಳ್ಕೋಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಿಎಆರ್‌ನ ಪೊಲೀಸ್ ಅಧಿಕಾರಿ ಎನ್.ರವಿಕುಮಾರ್ ಅವರು ೩೯ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿದ್ದು, ಸಿವಿಲ್ ಮುಖ್ಯಪೇದೆ ಸಿ.ವಿ.ರವೀಂದ್ರನಾಥರೆಡ್ಡಿ ಅವರು ೧೬ ವರ್ಷಗಳ ಸೇವೆ ಸಲ್ಲಿಸಿ, ಕೌಟುಂಬಿಕ ಕಾರಣಗಳಿಂದ ಸ್ವ-ಇಚ್ಚಾ ನಿವೃತ್ತಿ ಹೊಂದುತ್ತಿದ್ದು, ಇವರುಗಳು ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಠಾಣೆಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ಯಶಸ್ವಿಯಾಗಿರುತ್ತಾರೆ. ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಇಲಾಖೆಯಲ್ಲಿನ ಪ್ರತಿಯೊಬ್ಬರು ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಇಲಕ್ಕಿಯಾ ಕರುಣಾಕರನ್ ಅವರು ಕರೆ ನೀಡಿದರು.
ನಿವೃತ್ತರಾದ ಎನ್.ರವಿಕುಮಾರ್, ಸಿ.ವಿ.ರವೀಂದ್ರನಾಥರೆಡ್ಡಿ ಅವರುಗಳಿಗೆ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಬಿ.ಕೆ.ಉಮೇಶ್, ಸಹಾಯಕ ಆಡಳಿತಾಧಿಕಾರಿ ಜಿ. ವಿಶ್ವನಾಥ, ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಪಿ.ರಾಜು, ಶಿವರಾಜ್‌ಮುಧೋಳ್, ಆರ್‌ಪಿಐ ವಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *