ದಿನದ ಅಪರಾಧಗಳ ಪಕ್ಷಿನೋಟ20 ನೇ ಮಾರ್ಚ್‌ 2019

ಸುಲಿಗೆ : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 19.03.2019 ರಂದು ದೂರುದಾರರಾದ ಶ್ರೀ. ಮೆಹಬೂಬ್‌ ಹುಸೇನ್‌ ಬಿನ್‌ ಹುಸೇನ್‌ ಸಾಬ್‌ ಜೋಲಾಪುರಂ ಗ್ರಾಮ ತಮಿಳು ನಾಡು ರವರು ನೀಡಿದ ದೂರಿನಲ್ಲಿ ದಿನಾಂಕ 18.03.2019 ರಂದು ರಾತ್ರಿ ಸುಮಾರು 8.50 ಗಂಟೆ ಸಮಯದಲ್ಲಿ ದೂರುದಾರರು ನಾಚಿಕುಪ್ಪಂ ಗ್ರಾಮದಲ್ಲಿ ಕೆ.ಎ-51-.ಬಿ-6406 ಲಾರಿಯಿಂದ 440 ಮಹಾ ಸಿಮೆಂಟ್ ಚೀಲಗಳನ್ನು ಅನ್ ಲೋಡ್ ಮಾಡಿ ಒಟ್ಟು 1.40.800/ ರೂಗಳನ್ನು ಮಹದೇವರಾವ್ @ ಅಪ್ಪುರಾವ್ ರವರಿಂದ ಪಡೆದುಕೊಂಡು ಕೊಳಮೂರು-ಡಿ.ಪಿ.ಹಳ್ಳಿ ಮಾರ್ಗದ ಮುಖಾಂತರ ಶಿವಲಿಂಗಂ ಗ್ರಾಮದ ಬಳಿ ರಾತ್ರಿ ಸುಮಾರು 9.15 ಗಂಟೆಗೆ ಕೆ.ಎ-51-.ಬಿ-6406 ಲಾರಿಯಲ್ಲಿ ಬರುತ್ತಿದ್ದಾಗ ಎದುರುಗಡೆಯಿಂದ ಯಾರೋ ಇಬ್ಬರು ವ್ಯಕ್ತಿಗಳು ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಪ್ಪು ಬಣ್ಣದ ಪ್ಯಾಷನ್ ಪ್ರೋ ದ್ವಿ ಚಕ್ರ ವಾಹನದಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿ ಲಾರಿಯ ಮುಂದಿನ ಡೋರ್ ಗಳಲ್ಲಿ ಹತ್ತಿ ಲಾರಿ ಚಾಲಕನಿಗೆ ಕೈಗಳಿಂದ ಹೊಡೆದು ಚಾಲಕನ ಬಳಿ  ಇದ್ದ ಒಟ್ಟು 1.40.800/- ರೂಗಳನ್ನು ಕಿತ್ತುಕೊಂಡು  ಹೊರಟುಹೋಗಿರುತ್ತಾರೆ.

 –ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಶ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:  19.03.2019 ರಂದು ದೂರುದಾರರಾದ ಶ್ರೀ. ಶ್ರೀಧರ್‌  ಬಿನ್‌ ವೆಂಕಟೇಶಪ್ಪ ಕೆಸರನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ 14-03-2019 ರಂದು ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ದೂರುದಾರರ ಅಣ್ಣನಾದ ಚಂದ್ರಶೇಖರ್ ಎಂಬುವರು, ಆರೋಪಿ ವೆಂಕಟೇಶ್‌  ರವರ ಜೊತೆಯಲ್ಲಿ  ದ್ವಿಚಕ್ರ ವಾಹನ ರಾಯಲ್ ಎನ್‌ಫೀಲ್ಡ್ ಸಂಖ್ಯೆ ಇರುವುದಿಲ್ಲ ವಾಹನ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯಲ್ಲಿರುವ ಚಿಕ್ಕ ಅಂಕಂಡಹಳ್ಳಿ ಗೇಟ್ ಸಮೀಪ ದ್ವಿಚಕ್ರ ವಾಹನದ ಸವಾರನಾದ ಆರೋಪಿ ವೆಂಕಟೇಶ್ ಎಂಬುವನು ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಉಬ್ಬರು(ಹಂಪ್ಸ್) ಮೇಲೆ ಚಲಾಯಿಸಿದ್ದರಿಂದ ಹಿಂಬದಿಯಲ್ಲಿ ಕುಳಿತಿದ್ದ ಚಂದ್ರಶೇಖರ್ ಎಂಬುವರು ಕೆಳಗೆ ಬಿದ್ದು,  ತಲೆಯ ಹಿಂಭಾಗ ತೀವ್ರ ಸ್ವರೂಪ ರಕ್ತಗಾಯಗಳಾಗಿದ್ದು, ಇವರನ್ನು  ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತದ ದೆಸೆಯಿಂದ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದರಿಂದ ದಿನಾಂಕ 19-03-2019 ರಂದು ರಾತ್ರಿ ಸುಮಾರು 7-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಚಂದ್ರಶೇಖರ್  45 ವರ್ಷ ರವರು ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *