ದಿನದ ಅಪರಾಧಗಳ ಪಕ್ಷಿನೋಟ 9ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 08.09.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಎನ್‌.ಡಿ.ಪಿ.ಎಸ್‌  ಕಾಯ್ದೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.08.09.2020 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಮಹೇಂದ್ರ ಕುಮಾರ್ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಶ್ರೀ ಚೇತನ್‌ಕುಮಾರ್, ಪೊಲೀಸ್ ಕಾನ್ಸ್‌ಟೇಬಲ್ ರವರು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಮೊ.ಸಂ.52/2020 ಕಲಂ:395,384 ಐ.ಪಿಸಿ ಕೇಸಿನಲ್ಲಿ ಆರೋಪಿಯಾದ ತೊಂಡೆ @ ಪ್ರಶಾಂತ್ ರವರ ಪತ್ತೆಗಾಗಿ ನೇಮಿಸಿದ್ದು, ಅದರಂತೆ ದೂರುದಾರರು ಮತ್ತು ಚೇತನ್‌ಕುಮಾರ್ ರವರು ರಾಬರ್ಟ್‌ಸನ್‌ಪೇಟೆ, ಆಂಡ್ರಸನ್‌ಪೇಟೆ ಕಡೆ ಗಸ್ತನ್ನು ನಿರ್ವಹಿಸಿಕೊಂಡು ಬೆಳಿಗ್ಗೆ ಸುಮಾರು 11.30 ಗಂಟೆಯಲ್ಲಿ ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದು ಕೃಷ್ಣಗಿರಿ ಲೈನ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಕೃಷ್ಣಗಿರಿ ಲೈನಿನ ಜೋಸೆಫ್ ಬಿನ್ ಜೇಮ್ಸ್ ಮತ್ತು ಪುರೋಚ್ಚಿ ಕುಮಾರ್ ಬಿನ್ ನಾಗನ್ ಎಂಬುವರು, ಪುರೋಚ್ಚಿಕುಮಾರ್ ರವರ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಮಾಡಿರುವುದಾಗಿ ಮಾಹಿತಿ ಬಂದಿದ್ದು, ಸದರಿ ಮನೆಯ ಬಳಿ ಹೋಗಿ ನೋಡಲಾಗಿ ಸದರಿ ಮನೆಯ ಮೇಲೆ ತಮಿಳು ಭಾಷೆಯಲ್ಲಿ ಸೆಂದಿಲ್ ವಡಿವೇಲನ್ ಇಲ್ಲಂ(ತಮಿಳು ಭಾಷೆಯಲ್ಲಿ) 27.08.1985 ಎಂತ ನಮೂದು ಇದ್ದು, ಮನೆಯ ಬಾಗಿಲು ಹೊರಗಿನಿಂದ ಮುಚ್ಚಿರುತ್ತದೆ ಎಂದು ಸದರಿ ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಮಾಡಿರುವ ಮನೆಯ ಮೇಲೆ ದಾಳಿ ಮಾಡಿ ದಾಸ್ತಾನು ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.

 

Leave a Reply

Your email address will not be published. Required fields are marked *