ದಿನದ ಅಪರಾಧಗಳ ಪಕ್ಷಿನೋಟ 8ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 06.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುರೇಶ್ ಬಾಬು ಬಿನ್ ವೆಂಕಟಮುನಿಯಪ್ಪ, ಅಗ್ರಹಾರಸೋಮರಸನಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು ರವರ ತಮ್ಮ ಶಿವಕುಮಾರ್, 27 ವರ್ಷ ರವರು 06 ವರ್ಷಗಳಿಂದ ಬಡಮಾಕನಹಳ್ಳಿ ಬಳಿ ಕೋಲಾರ ರಸ್ತೆ ಪಕ್ಕ ತೋಟ ಮಾಡುತ್ತಿರುವ ಸಿ.ಎಂ.ಆರ್ ಶ್ರೀನಾಥಪ್ಪ ಎಂಬುವರ ಬಳಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು. ದಿನಾಂಕ: 06.09.2020 ರಂದು ಸಂಜೆ 4-00 ಗಂಟೆಗೆ ಶ್ರೀನಾಥಪ್ಪನ ತೋಟದಲ್ಲಿಯೇ ಶಿವಕುಮಾರ್ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ವಿಷ ಸೇವನೆ ಮಾಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಆಕ್ಸನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು,  ದಿನಾಂಕ:07.09.2020 ರಂದು ಬೆಳಿಗ್ಗೆ 9-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಶಿವಕುಮಾರ್ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *