ದಿನದ ಅಪರಾಧಗಳ ಪಕ್ಷಿನೋಟ 7ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 06.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ದಾಸಪ್ಪ, ತೂಕಲ್ ಸಂತೇಗೇಟ್‌, ಕ್ಯಾಸಂಬಳ್ಳಿ ಹೋಬಳಿ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ದೂರುದಾರರ ಅತ್ತೆ ನಾರಾಯಣಮ್ಮ ಮತ್ತು ಅವರ ಮಕ್ಕಳಾದ ಶ್ರೀನಾಥ್ ಸುಬ್ರಮಣಿ ಹಾಗೂ ಗೋಪಾಲ್ ರವರಿಗೆ ಜಮೀನು ವಿಚಾರದಲ್ಲಿ ತಕರಾರಿದ್ದು,  ದಿನಾಂಕ  06.09.2020 ರಂದು ಬೆಳಿಗ್ಗೆ 11.00   ಗಂಟೆಯಲ್ಲಿ   ದೂರುದಾರರು  ಜಮೀನಿನಲ್ಲಿ ಜೆ.ಸಿ.ಬಿಯಿಂದ  ಗಿಡ ಮತ್ತು ಕಲ್ಲುಗಳನ್ನು   ನೆಲಸಮ ಮಾಡುತ್ತಿದ್ದಾಗ, ನಾರಾಯಣಮ್ಮ, ಶ್ರೀನಾಥ್, ಸುಬ್ರಮಣಿ ಹಾಗೂ ಗೋಪಾಲ್ ರವರು ಬಂದು ದೂರುದಾರರನ್ನು ಕುರಿತು, “ ಈ ಜಮೀನಿನಲ್ಲಿ ನಮಗೆ ಭಾಗ   ಬರಬೇಕು , ನಿನೇಕೆ,  ಜೆ.ಸಿ.ಬಿ ಯಿಂದ  ಕೆಲಸ ಮಾಡುತ್ತಿದ್ದೀಯಾ, ಇವತ್ತು ನಿನ್ನನ್ನು ಮುಗಿಸದೆ   ಬಿಡುವುದಿಲ್ಲ” ಎಂದು ಹೇಳಿ   ಕೆಟ್ಟ  ಮಾತುಗಳಿಂದ ಬೈದು,  ಕೊಲೆ ಮಾಡುವ ಉದ್ದೇಶದಿಂದ  ಕಬ್ಬಿಣದ ರಾಡ್ ಮತ್ತು ಕೈಗಳಿಂದ  ದೂರುದಾರರಿಗೆ ಹೊಡೆದು  ರಕ್ತಗಾಯಪಡಿಸಿರುತ್ತಾರೆ.

 

– ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಮೂರ್ತಿ ಬಿನ್ ಗುರಪ್ಪ, ತ್ಯಾಗರಸನಹಳ್ಳಿ ಗ್ರಾಮ, ಹೊಸೂರು ತಾಲ್ಲೂಕು, ತಮಿಳುನಾಡು ರವರು  ದಿನಾಂಕ:03/05/2020 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ಹೀರೋ ಸ್ಲೆಂಡರ್ ಪ್ರೋ ದ್ವಿಚಕ್ರವಾಹನ ಸಂಖ್ಯೆ: ಟಿ.ಎನ್-70-ಎಸ್ -2637 ಬೆಲೆ  30,000/- ಬಾಳುವುದನ್ನು ಬಂಗಾರಪೇಟೆಯ ಆರ್.ಎಂ.ಸಿ.ಯಾರ್ಡ್ ಬಳಿ ಇರುವ ತರಕಾರಿ ಮಾರ್ಕೆಟ್ ಬಳಿ ನಿಲ್ಲಿಸಿದ್ದಾಗ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ

 

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ನಾರಾಯಣಪ್ಪ, ಕದರಿಗಾನಕುಪ್ಪ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಹೆಂಡತಿ ಸರೋಜಮ್ಮ, 52 ವರ್ಷ ರವರಿಗೆ ಮತ್ತು  ಅವರ ಅಕ್ಕಪಕ್ಕದ ಮನೆಯವರಿಗೆ  ಈಗ್ಗೆ ಸುಮಾರು 2 ತಿಂಗಳಿಂದ  ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆಗಳು ಇದ್ದು,  ಈ ವಿಚಾರದಲ್ಲಿ ತಲೆ ಕೆಡಿಸಿ ಕೊಂಡು ದಿನಾಂಕ-05-09-2020 ರಂದು ರಾತ್ರಿ 11.45 ಗಂಟೆಯಲ್ಲಿ  ಮನೆಯಲ್ಲಿ ಎಲ್ಲರೂ ಮಲಗಿದ್ದಾಗ  ಸರೋಜಮ್ಮ ರವರು ಅದೇ ಗ್ರಾಮದ ನರಸಿಂಹಪ್ಪ ರವರ ಜಮೀನಿನಲ್ಲಿ ಇರುವ ಬಾವಿಯಲ್ಲಿ  ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *