ದಿನದ ಅಪರಾಧಗಳ ಪಕ್ಷಿನೋಟ 6ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 05.09.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಎನ್‌.ಡಿ.ಪಿ.ಎಸ್‌  ಕಾಯ್ದೆ :01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿದಾರರಾದ ಶ್ರೀ.ಎಂ.ಸೂರ್ಯಪ್ರಕಾಶ್. ಸಿ.ಪಿ.ಐ, ರಾಬರ್ಟಸನ್ ಪೇಟೆ ವೃತ್ತ ರವರು ದಿನಾಂಕ.05.09.2020 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ಕಛೇರಿಯಲ್ಲಿದ್ದಾಗ ಬಂದ ಮಾಹಿತಿಯಂತೆ, ಆರೋಪಿಗಳಾದ ಸಂತೋಷ್ ಕುಮಾರ್ ಬಿನ್ ಗಣೇಶ್ ರಾವ್‌, ಪಂಡಾರಂ ಲೈನ್, ಮಾರಿಕುಪ್ಪಂ ಮತ್ತು ಜೋಸೆಪ್ ಜೇಮ್ಸ್, ಕೃಷ್ಣಗಿರಿ ಲೈನ್ ಮಾರಿಕುಪ್ಪಂ ರವರು ಬೌರಿಲಾಲ್ ಪೇಟೆ ಕಡೆಯಿಂದ ಅಶ್ವಥ್ ಲೇ ಔಟ್ ಕಡೆ ಹೋಗುವ ರಸ್ತೆಯಲ್ಲಿ ಒಂದು ಬ್ಯಾಗಿನಲ್ಲಿ ಗಾಂಜಾ ಮಾದಕ ವಸ್ತುವನ್ನು ಇಟ್ಟಿಕೊಂಡಿರುವುದಾಗಿ ತಿಳಿದು ಪಂಚರನ್ನು ಸಮಕ್ಷಮ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿದಾಗ ಆರೋಪಿ ಸಂತೋಷ್ ಕುಮಾರ್ ನನ್ನು ಹಿಡಿದುಕೊಂಡಿದ್ದು, ಮತ್ತೊಬ್ಬ ಆರೋಪಿ ಜೋಸೆಪ್ ಅಲ್ಲಿಂದ ಓಡಿಹೋಗಿರುತ್ತಾನೆ. ಆರೋಪಿ ಸಂತೋಷ್ ಕುಮಾರ್ ಬಳಿಯಿದ್ದ ಬ್ಯಾಗಿನ ಬಗ್ಗೆ ವಿಚಾರಣೆ ಮಾಡಲಾಗಿ ಆತನು ಇದರಲ್ಲಿ ಗಾಂಜಾವಿದ್ದು, ಗಿರಾಕಿಗಳಿಗೆ ಮಾರಾಟ ಮಾಡಲು ಇಟ್ಟಿಕೊಂಡಿರುವುದಾಗಿ ತಿಳಿಸಿರುತ್ತಾನೆ. ಅದನ್ನು ಪಂಚರ ಸಮಕ್ಷಮ ಪ್ಲಾಸ್ಟಿಕ್ ಕವರ್ ಸಮೇತ ತೂಕ ಮಾಡಲಾಗಿ ಒಟ್ಟು ತೂಕ 220 ಗ್ರಾಂ ಇರುತ್ತದೆ. ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಗಳಾದ ಸಂತೋಷ್ ಕುಮಾರ್ ಮತ್ತು ಜೋಸೆಫ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತೆ

– ಅಸ್ವಾಭಾವಿಕ ಮರಣ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರಾಜು ಬಿನ್ ವೆಂಕಟೇಶಪ್ಪ, ಬೋಯಿಲೂರು ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂದೆ ವೆಂಕಟೇಶಪ್ಪ ಬಿನ್ ರಾಮಣ್ಣಭೋವಿ, 50 ವರ್ಷ ರವರು ದಿನಾಂಕ 05.09.2020 ರಂದು ಬೆಳಿಗ್ಗೆ 05.30 ಗಂಟೆಯಲ್ಲಿ ಬಹಿರ್ದೆಸೆಗೆ ಹೋಗುವ ಸಲುವಾಗಿ ಬಯಲಿನ ಕಡೆಗೆ ಹೋಗುತ್ತಿದ್ದಾಗ, 3 ಆನೆಗಳು ಬಂದು ವೆಂಕಟೇಶಪ್ಪ ರವರನ್ನು ಸೊಂಡಲಿನಿಂದ ಎತ್ತಿ ಬಿಸಾಕಿದ್ದು, ಕೂಡಲೇ ವೆಂಕಟೇಶಪ್ಪ ರವರನ್ನು ಚಿಕಿತ್ಸೆಗೆ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೇ ದಿನಾಂಕ 05.09.2020 ರಂದು ಮಧ್ಯಾಹ್ನ 12.10 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *