ದಿನದ ಅಪರಾಧಗಳ ಪಕ್ಷಿನೋಟ 4 ನೇ ಸೆಪ್ಟೆಂಬರ್‌ 2019

– ಹಲ್ಲೆ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 03.09.2019 ರಂದು ದೂರುದಾರರಾದ ಶ್ರೀಮತಿ ರಾಮಕ್ಕ ಕೋಂ ಬೈರಪ್ಪ, ರೆಡ್ಡಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಗಂಡ ಬೈರಪ್ಪ ರವರು ದೂರುದಾರರನ್ನು ಇನ್ನು ಏಕೆ ಅಡುಗೆ ಮಾಡಲಿಲ್ಲವೆಂದು ಬೈಯುತ್ತಿದ್ದಾಗ, ಆರೋಪಿಗಳಾದ ವಿಜಯಕುಮಾರ್‌ ಮತ್ತು ಇತರರು ಹಳೆಯ ದ್ವೇಷದಿಂದ ನೀವು ನಮ್ಮನ್ನು ಬೈಯುತ್ತಿರುವುದು ಎಂದು ದೂರುದಾರರ ಮೇಲೆ ಜಗಳಕ್ಕೆ ಬಂದು, ಕೆಟ್ಟ ಮಾತುಗಳಿಂದ ಬೈದು, ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

– ದೊಂಬಿ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವಿಜಯಕುಮಾರಿ ಕೊಂ ಷಣ್ಮುಗಂ, ಕುಪ್ಪಸ್ವಾಮಿ ಮೊದಲಿಯಾರ್‌ ಲೇಔಟ್‌, ಬಂಗಾರಪೇಟೆ ರವರು ದಿನಾಂಕ 03.09.2019 ರಂದು ಬೆಳಿಗ್ಗೆ 07-30 ಗಂಟೆಗೆ ಕಾಲೇಜಿಗೆ ಹೋಗಲು ಮನೆಯಿಂದ ಹೊರ ಬಂದಾಗ, ಆರೋಪಿಗಳಾದ ಬೈರಪ್ಪ, ಆನಂದ, ಮೋಹನ್‌ ಬಾಬು, ಪಾರ್ವತಮ್ಮ, ಅರ್ಚನಾ, ನಿಶಾ, ಮಹಾಲಕ್ಷ್ಮೀ, ಸುಧಾ ಮತ್ತು ನಂದಿನಿ ರವರು ಹಳೇ ದ್ವೇಷವನ್ನಿಟ್ಟುಕೊಂಡು ದೂರುದಾರರಿಗೆ ಅಡ್ಡ ಬಂದು ಕೆಟ್ಟ ಮಾತುಗಳಿಂದ ಬೈದು, ಇಟ್ಟಿಗೆ ಕಲ್ಲು, ಕೋಲು ಮತ್ತು ಕೈಗಳಿಂದ ಹೊಡೆದು ಗಾಯಪಡಿಸಿದ್ದು, ದೂರುದಾರರ ತಾಯಿ ಚನ್ನಮ್ಮ, ತಂಗಿ ಮತ್ತು ಅಣ್ಣ ಚಲಪತಿ ರವರು ಜಗಳ ಬಿಡಿಸಲು ಬಂದಾಗ ಪ್ರಾಣ ಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *