ದಿನದ ಅಪರಾಧಗಳ ಪಕ್ಷಿನೋಟ 31ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 30.10.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರಪ್ಪ ಬಿನ್ ನಾರಾಯಣಪ್ಪ, ರಾಮಸಂದ್ರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಶ್ರೀನಿವಾಸಮೂರ್ತಿ.ಆರ್, 27 ವರ್ಷ ರವರು ದಿನಾಂಕ 29.10.2020 ರಂದು ಸಂಜೆ 6.45 ಗಂಟೆಯಲ್ಲಿ ರಾಮಸಂದ್ರ ಗ್ರಾಮದಿಂದ ಹುಣಸಿಕೋಟೆಗೆ ಹೋಗಲು ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-08-ಎಲ್-2582 ನ್ನು ಚಲಾಯಿಸಿಕೊಂಡು ಯಳೇಸಂದ್ರ ಸಮೀಪ ಹೋಗುತ್ತಿದ್ದಾಗ, ಎದುರುಗಡೆಯಿಂದ ದ್ವಿಚಕ್ರ ವಾಹನ ಎಪಿ-03-ಸಿಟಿ-6545 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸಮೂರ್ತಿ.ಆರ್ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ಶ್ರೀನಿವಾಸಮೂರ್ತಿ.ಆರ್ ರವರಿಗೆ ರಕ್ತಗಾಯಗಳಾಗಿರುತ್ತದೆ.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪವನ್ ಕುಮಾರ್‌ ಬಿನ್ ವೆಂಕಟೇಶಪ್ಪ, ನಾರಾಯಣಪುರ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಂಗಿ ಮಲ್ಲಿಕಾ.ವಿ, 23 ವರ್ಷ ರವರು ದಿನಾಂಕ 29.10.2020 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ನಾರಾಯಣಪುರ ಗ್ರಾಮದಿಂದ ಬಂಗಾರಪೇಟೆ ಪಟ್ಟಣಕ್ಕೆ ಹೋಗಿದ್ದು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *