ದಿನದ ಅಪರಾಧಗಳ ಪಕ್ಷಿನೋಟ 31ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 30.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 06

ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಭಾರತದ್ಯಾಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ತುರ್ತು ಘೋಷಣೆ ಮಾಡಿದ್ದು, ಈ ಸಂಬಂಧ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ 3 ಪ್ರಕರಣ ದಾಖಲಾಗಿರುತ್ತದೆ.

ಮಾರಿಕುಪ್ಪಂ ಪೊಲೀಸ್ ಠಾಣೆ 4 ಪ್ರಕರಣಗಳು- ದಿನಾಂಕ 30.03.2020 ರಂದು ಮದ್ಯಾಹ್ನ 2.00 ಗಂಟೆಯ ಸಮಯದಲ್ಲಿ ಈ ಕೇಸಿನ ಪಿರ್ಯಾದಿದಾರರು ರಾಮಾಂಜಲಪ್ಪ, ಹೆಡ್ ಕಾನ್ಸ್‌ಟೇಬಲ್ ರವರು  ಕೋವಿಡ್-19 ನಿಷೇದಾಜ್ಞೆ ಜಾರಿ ಇರುವ ಪ್ರಯುಕ್ತ ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದಿನ ಅರ್ ಡಿ ಬ್ಲಾಕ್ ನ ರಸ್ತೆಯಲ್ಲಿ ಯಾವುದೇ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಅನ್ನು ಧರಿಸದೆ ಆರೋಪಿ ಮುನಿಸ್ವಾಮಿ, ೨ ಬ್ಲಾಕ್‌, ಮಾರಿಕುಪ್ಪಂ ರವರು ಬರುತ್ತಿದ್ದು, ಇವರು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಇವರ ವಿರುದ್ದ  ಕ್ರಮ ಜರುಗಿಸಿರುತ್ತೆ.

ದಿನಾಂಕ 30.03.2020 ರಂದು ಮದ್ಯಾಹ್ನ 3.30 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರಾದ ನೌಷದ್‌ ಪಾಷ, ಪಿಸಿ 113 ರವರು ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದಿನ ಅರ್ ಡಿ ಬ್ಲಾಕ್ ನ ರಸ್ತೆಯಲ್ಲಿ ಯಾವುದೇ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಅನ್ನು ಧರಿಸದೆ ಆರೋಪಿ ವಿಘ್ನೇಶ್, ಕರ್ನಲ್‌ಲೈನ್ ಮಾರಿಕುಪ್ಪಂ ರವರು ಬರುತ್ತಿದ್ದು, ಇವರು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಇವರ ವಿರುದ್ದ  ಕ್ರಮ ಜರುಗಿಸಿರುತ್ತೆ.

ದಿನಾಂಕ 30.03.2020 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ವೆಂಕಟರಾಮಪ್ಪ, ಪಿಐ, ಸಿಇಎನ್‌ ಪೊಲೀಸ್ ಠಾಣೆ ರವರು  ಕೋವಿಡ್-19 ನಿಷೇದಾಜ್ಞೆ ಜಾರಿ ಇರುವ ಪ್ರಯುಕ್ತ ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದಿನ ಕೆಂಪಾಪುರ ಚೆಕ್ ಪೋಸ್ಟ್ ಗೆ ಹೋಗುತ್ತಿದ್ದಾಗ ದೊಡ್ಡಕಲ್ಲಹಳ್ಳಿ ಗ್ರಾಮದ ಬಳಿ ರಸ್ತೆಯಲ್ಲಿ ಆರೋಪಿಗಳಾದ ನೌ, ಲೂರ್ದ್‌‌ನಗರ, ಆಂಡ್ರಸನ್‌ಪೇಟೆ ಮತ್ತು ಇರ್ಫಾನ್‌, ಕುಪ್ಪಂ ವಾಸಿ ರವರು ಯಾವುದೇ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸದೆ ದ್ವಿಚಕ್ರ ವಾಹನ ಸಂಖ್ಯೆ ಕೆಎ 08 ವಿ 0792 ರಲ್ಲಿ  ಬರುತ್ತಿದ್ದು ಇವರು ಸರ್ಕಾರ ಹಾಗು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದರಿಂದ  ಇವರುಗಳ ವಿರುದ್ದ ಕ್ರಮ ಜರುಗಿಸಿರುತ್ತಾರೆ.

ದಿನಾಂಕ 30.03.2020 ರಂದು ಮದ್ಯಾಹ್ನ 1.00 ಗಂಟೆಯ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ವೆಂಕಟರಾಮಪ್ಪ, ಪಿಐ, ಸಿಇಎನ್‌ ಪೊಲೀಸ್ ಠಾಣೆ ರವರು ಕೋವಿಡ್-19 ನಿಷೇದಾಜ್ಞೆ ಜಾರಿ ಇರುವ ಪ್ರಯುಕ್ತ ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದಿನ ಕೆಂಪಾಪುರ ಚೆಕ್ ಪೋಸ್ಟ್ ಗೆ ಹೋಗುತ್ತಿದ್ದಾಗ ಘಟ್ಟಮಾದಂಗಲ ಗ್ರಾಮದ ಬಳಿ ರಸ್ತೆಯಲ್ಲಿ ಆರೋಪಿ ಶೇಖ್‌ ನಾಸೀರ್‍, ಎನ್‌ಟಿಆರ್‌ ಕಾಲೋನಿ, ಕುಪ್ಪಂ ಆಂದ್ರ ಪ್ರದೇಶ ರವರು ಯಾವುದೇ ಮುಂಜಾಗ್ರತ ಕ್ರಮವಾಗಿ ಮಾಸ್ಕ್ ಗಳನ್ನು ಧರಿಸದೆ ಪ್ಯಾಸೆಂಜರ್ ಅಟೋ ಸಂಖ್ಯೆ ಎಪಿ03 ಎಕ್ಸ್ 9970 ರಲ್ಲಿ ಬರುತ್ತಿದ್ದು ಈತನು ಸರ್ಕಾರ ಹಾಗು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದರಿಂದ  ಇವರುಗಳ ವಿರುದ್ದ ಕ್ರಮ ಜರುಗಿಸಿರುತ್ತಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ –  ದಿನಾಂಕ: 30.03.2020 ರಂದು ಬೆಳಿಗ್ಗೆ  11.45 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ರಾಜೇಶ್ ಬಾಬು , ಹೆಡ್‌ ಕಾನ್ಸ್‌ಟೇಬಲ್, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯವರು  ಕೊರೋನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಆಂಡ್ರಸನ್‌ಪೇಟೆ ವೃತ್ತದಲ್ಲಿ  ಕರ್ತವ್ಯದಲ್ಲಿದ್ದಾಗ  ಆರೋಪಿ ಆರ್ಮುಗಂ ಬಿನ್ ಲೇಟ್ ಸುಬ್ರಮಣಿ, 50 ವರ್ಷ, ಟೀ ವ್ಯಾಪಾರಿ, ವಾಸ ಲೂರ್ದ್ ನಗರ, ಆಂಡ್ರಸನ್ ಪೇಟೆ ಎಂಬುವವರು ಆಂಡ್ರಸನ್ ಪೇಟೆ ವೃತ್ತದಲ್ಲಿ ಟೀ ಮಾರಾಟ ಮಾಡುತ್ತಿದ್ದು, ಸದರಿ ಆರೋಪಿ ಸರ್ಕಾರ ಹಾಗು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದರಿಂದ  ಇವರುಗಳ ವಿರುದ್ದ ಕ್ರಮ ಜರುಗಿಸಿರುತ್ತಾರೆ.

 

ಕಾಮಸಮುದ್ರ ಪೊಲೀಸ್ ಠಾಣೆ – ದಿನಾಂಕ 30.03.2020 ರಂದು ಈ ಕೇಸಿನ ದೂರುದಾರರಾದ ಮುನಿರಾಜ್ ಪಿಸಿ 119 ಮತ್ತು ಮುನಿಕೃಷ್ಣ ಪಿಸಿ 208 ರವರು ಕೋವಿಡ್-19 ನಿಷೇದಾಜ್ಞೆ ಜಾರಿ ಇರುವ ಪ್ರಯುಕ್ತ, ಗಸ್ತಿನಲ್ಲಿದ್ದಾಗ ಆರೋಪಿಗಳಾದ ೧. ನಾಗರಾಜ, ಹೊಸಕೋಟೆ ಬೆಂಗಳೂರು ಗ್ರಾಮಾಂತರ, ೨. ವಿಜಯ್‌, ಬೆಗ್ಲಿಬೆನಜೇನಹಳ್ಳಿ, ಕೋಲಾರ,  ೩. ಮುನಿರಾಜ್, ಬೆಗ್ಲಿಬೆನಜೇನಹಳ್ಳಿ, ಕೋಲಾರ, ೪. ಹರೀಶ್, ಕಾರಮಂಗಲ, ಬಂಗಾರಪೇಟೆ, ೫. ಗೌರೀಶ್,ಕಾರಮಂಗಲ, ಬಂಗಾರಪೇಟೆ, ೬. ಶಶಿಕುಮಾರ್‍,ಬೆಗ್ಲಿಬೆನಜೇನಹಳ್ಳಿ, ಕೋಲಾರ, ೭. ಮಹೇಶ್, ಹೊಸಕೋಟೆ ಬೆಂಗಳೂರು ಗ್ರಾಮಾಂತರ ರವರು  ಬಲಮಂದೆ ರಸ್ತೆಯ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ, ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಹ ಅದನ್ನು ಗಣನೆಗೆ ತೆದುಕೊಳ್ಳದೇ ಗುಂಪು ಕಟ್ಟಿಕೊಂಡು ಅನವಶ್ಯಕ ಚರ್ಚೆಯಲ್ಲಿ ತೊಡಗಿದ್ದು ಇವರು ಸರ್ಕಾರ ಹಾಗೂ ಕೋಲಾರ ಜಿಲ್ಲಾಧಿಕಾರಿಗಳ ಕೋವಿಡ್-19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿ, ರೋಗದ ಸೋಂಕು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ಆರೋಪಿಗಳು ನಿರ್ಲಕ್ಷತನವನ್ನು ತೋರ್ಪಡಿಸಿ, ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಇವರುಗಳ ವಿರುದ್ದ ಕ್ರಮ ಜರುಗಿಸಿರುತ್ತಾರೆ.

Leave a Reply

Your email address will not be published. Required fields are marked *