ದಿನದ ಅಪರಾಧಗಳ ಪಕ್ಷಿನೋಟ 31ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:30.01.2020 ರಂದು     ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-29-01-2020 ರಂದು ಸಂಜೆ 7.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ವೆಂಕಟರಾಮಪ್ಪ, ಶ್ರೀನಿವಾಸಪುರ, ಕೆ.ಜಿ.ಎಫ್ ತಾಲ್ಲೂಕು ರವರು ತಮ್ಮ ಮನೆ ಮುಂದೆ ಹುಡುಗರು ಆಟ ಆಡುತ್ತಾ ಜೋರಾಗಿ ಕಿರುಚುತ್ತಿದ್ದಾಗ ಪಿರ್ಯಾದಿ ಅವರನ್ನು ಗದಿರಿಸಿದ ವಿಚಾರದಲ್ಲಿ ಪಿರ್ಯಾದಿ ಮನೆ ಮುಂದೆ ಇರುವ ಆರೋಪಿಗಳಾದ ಹರೀಶ್ ಮತ್ತು ಹಂಸಮ್ಮ ರವರು ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ಯೊಡನೆ ಜಗಳ ತೆಗೆದು, ಕೆಟ್ಟ ಮಾತುಗಳಿಂದ ಬೈದು ಹರೀಶ್ ರವರು ಒಂದು ದೊಣ್ಣೆಯಿಂದ ಪಿರ್ಯಾದಿ ಎಡ ಕಾಲಿನ ಮೇಲೆ ಹೊಡೆದು ಮೂಗು ಗಾಯ ಪಡಿಸಿರುತ್ತಾನೆ. ಹಂಸಮ್ಮ ದೂರುದಾರರಿಗೆ ರವರು ಕೈಗಳಿಂದ ಹೊಡೆದಿರುತ್ತಾರೆ.

ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ  ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.29-08-2010 ರಂದು ಈ ಕೇಸಿನ ದೂರುದಾರರಾದ ಶ್ರೀಮತಿ ಕೋಮತಿ ಕೋಂ ತನಿಗಚಲಂ, ವಸಂತ ನಗರ, ಬೆಮಲ್ ನಗರ, ಕೆ.ಜಿ.ಎಫ್ ರವರು ತನಿಗಾಚಲಂ @ ಬಾಬು ರವರನ್ನು ಮದುವೆಯಾಗಿದ್ದು, ದಿನಾಂಕ.15-11-2011 ರಂದು ಗಂಡ ತನಿಗಚಲಂ ರವರು ಚತ್ತೀಸ್ ಗಡದ ಬೆಮಲ್ ಕ್ವಾಟ್ರಸ್ ಗೆ ದೂರುದಾರರನ್ನು ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದು ದಿನಾಂಕ.26-11-2012 ರಂದು ದೂರುದಾರರಿಗೆ ಲೋಕೇಶ್ವರ್ ಎಂಬ ಗಂಡು ಮಗು ಆಗಿರುತ್ತೆ. 2013 ನವೆಂಬರ್ ತಿಂಗಳಲ್ಲಿ ತನಿಗಾಚಲಂ ರವರಿಗೆ ಛತ್ತೀಸ್ ಗಡದಿಂದ ತೆಲಂಗಾಣ ರಾಜ್ಯದ ರಾಮಗುಂಡಂಗೆ ವರ್ಗಾವಣೆಯಾಗಿ, ರಾಮಗುಂಡಂನ ಬೆಮಲ್ ಕ್ವಾಟ್ರಸ್ ಗೆ ಹೋಗಿ ವಾಸ ಮಾಡುತ್ತಿದ್ದಾಗ, ಸದರಿ ಮನೆಯ ಪಕ್ಕದ ಮನೆಯಲ್ಲಿ ವಾಸವಿದ್ದ ಬೆಮಲ್ ನೌಕರ ಸೆಂದಿಲ್ ಕುಮಾರ್ ಎಂಬುವರು ತನಿಗಾಚಲಂ ರವರ ಜೊತೆ ಬೆಮಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅವಿವಾಹಿತನಾಗಿದ್ದು, ಆತನು ತನಿಗಾಚಲಂ ರವರೊಂದಿಗೆ ಮನೆಗೆ ಬಂದು ಹೋಗುತ್ತಿದ್ದಾಗ ಪಿರ್ಯಾದಿಗೆ ಪರಿಚಯವಾಗಿದ್ದು, ಈ ವಿಚಾರದಲ್ಲಿ ತನಿಗಾಚಲಂ ರವರಿಗೆ ಸೆಂದಿಲ್ ಕುಮಾರ್ ಮೇಲೆ ಅನುಮಾನ ಬಂದು ಪಿರ್ಯಾದಿಗೆ ಮತ್ತು ಸೆಂದಿಲ್ ಕುಮಾರ್ ಗೆ ಅನೈತಿಕ ಸಂಬಂಧ ಇದೆ ಎಂದು ಪಿರ್ಯಾದಿ ಮೇಲೆ ಅನುಮಾನಪಟ್ಟು ಆಕೆಯನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ಪಿರ್ಯಾದಿ ಸಹಿಸಿಕೊಂಡು ಸಂಸಾರ ಸರಿಮಾಡಿಕೊಂಡು ಹೋಗುತ್ತಿದ್ದು. ಈ ವಿಚಾರದಲ್ಲಿ ತನಿಗಾಚಲಂ ರವರು ತಮಗೆ ಹುಟ್ಟಿದ ಮಗು ತನ್ನದಲ್ಲ ಯಾರೊಂದಿಗೋ ಅನೈತಿಕ ಸಂಬಂಧ ಇಟ್ಟುಕೊಂಡು ಈ ಮಗು ಹುಟ್ಟಿದೆ ಎಂದು ಪಿರ್ಯಾದಿಗೆ ಮಾನಸಿಕವಾಗಿ ನೋವು ಕೊಡುತ್ತಿದ್ದು, ಈ ವಿಚಾರದಲ್ಲಿ ಪ್ರತಿದಿನ ಆ1 ರವರು ಕೆಲಸ ಮುಗಿಸಿಕೊಂಡು ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ಪಿರ್ಯಾದಿಯನ್ನು ಬೈಯ್ಯುವುದು, ಹೊಡೆಯುವುದು ಮಾಡಿರುತ್ತಾರೆ. ಕ್ವಾಟ್ರಸ್ ನಲ್ಲಿ ಇದ್ದಾಗ, ಪಿರ್ಯಾದಿ ಮತ್ತೆ ಗರ್ಭಿಣಿಯಾಗಿದ್ದು, ಜನವರಿ 2017 ರಲ್ಲಿ ಆ1 ರವರು ಪಿರ್ಯಾದಿ ಗರ್ಭಿಣಿಯಾಗಿರುವ ವಿಚಾರದಲ್ಲಿ ಅನುಮಾನಪಟ್ಟು ದಿನಾಂಕ.31-01-2017 ರಂದು ಮನೆಯಲ್ಲಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ, ಪಿರ್ಯಾದಿಯನ್ನು ಕಾಲಿನಿಂದ ಹೊಟ್ಟೆಗೆ ಒದ್ದು ನೋವು ಮಾಡಿರುತ್ತಾನೆ. ಈ ವಿಚಾರದಲ್ಲಿ ಪಿರ್ಯಾದಿ ಆಕೆಯ ತಂದೆ ತಾಯಿಯವರಿಗೆ ಮಾಹಿತಿ ನೀಡಿರುತ್ತಾರೆ. ದಿನಾಂಕ.18-07-2017 ರಲ್ಲಿ ಬಂಗಾರಪೇಟೆ ಶ್ಯಾಂ ಆಸ್ಪತ್ರೆಯಲ್ಲಿ ಪಿರ್ಯಾದಿಗೆ ಡೆಲವರಿಯಾಗಿ ಮಗು ಸತ್ತುಹೋಗಿರುತ್ತೆ. ಸತ್ತುಹೋಗಿರುವ ಮಗು ತನ್ನ ಮಗುವಲ್ಲ ಎಂದು ಗಂಡ ತನಿಗಚಲಂ ರವರು ಪಿರ್ಯಾದಿಯೊಂದಿಗೆ ವಾದಿಸಿ, ಪಿರ್ಯಾದಿಯ ತವರು ಮನೆ ವಸಂತನಗರಕ್ಕೆ ಬಂದು ಆಕೆಯೊಂದಿಗೆ ಗಲಾಟೆಗಳು ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿರುತ್ತಾರೆ. ಈ ವಿಚಾರದಲ್ಲಿ ತನ್ನ ಗಂಡ ತನಿಗಚಲಂ ರವರ ಅಕ್ಕ ಲತಾ ಮಹೇಶ್ವರಿ ಮತ್ತು ಭಾವ ಶ್ರೀನಿವಾಸ ರವರು ತನ್ನ ಗಂಡ ಬೆಂಬಲವಾಗಿ ನಿಂತು ಪಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾರೆ.

Leave a Reply

Your email address will not be published. Required fields are marked *