ದಿನದ ಅಪರಾಧಗಳ ಪಕ್ಷಿನೋಟ 31ನೇ ಡಿಸೆಂಬರ್‌ 2019

 – ಜೂಜಾಟ ಕಾಯ್ದೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.12.2019  ರಂದು ಸಂಜೆ 5.00 ಗಂಟೆಯಲ್ಲಿ ಚಿಕ್ಕನಲ್ಲಗುಟ್ಟಹಳ್ಳಿ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದ ಬಳಿ  ಕಾಡುಮರಗಳ ಕೆಳಗೆ 1. ನಾರಾಯಣಪ್ಪ, ಬೂದಿಕೋಟೆ ಗ್ರಾಮ, 2.ಚಂಗಪ್ಪ, ಬೂದಿಕೋಟೆ ಗ್ರಾಮ, 3.ಅನೀಲ್ ಬಿನ್ ನಾರಾಯಣಪ್ಪ, ಬೂದಿಕೋಟೆ ಗ್ರಾಮ, 4. ಚಲಪತಿ, ಬೂದಿಕೋಟೆ ಗ್ರಾಮ, 5.ಬಾಬು ಕೊಂಡಪಲ್ಲಿ ಗ್ರಾಮ, 6. ನರಸಿಂಹ, ತೀತು ಬನಹಳ್ಳಿ ಗ್ರಾಮ, 7.ಸುರೇಶ್, ನಲ್ಲದಿಂಬನಹಳ್ಳಿ ಗ್ರಾಮ, ಹಾಗೂ ಇತರರು 2 ಕೋಳಿ ಹುಂಜಗಳನ್ನು ಬಳಸಿಕೊಂಡು ಕೋಳಿ ಹುಂಜಗಳ ಮೇಲೆ ಹಣವನ್ನು ಪಣವಾಗಿಟ್ಟುಕೊಂಡು ಪಂದ್ಯವನ್ನು ಆಡುತ್ತಿದ್ದು ಅವರನ್ನು ಪಿ.ಎಸ್.ಐ.  ಶ್ರೀ. ದಯಾನಂದ್‌  ಮತ್ತು ಸಿಬ್ಬಂದಿಯವರು   ಹಿಡಿದುಕೊಂಡು 1500/- ರೂ ಹಾಗೂ ಎರಡು ಕೋಳಿ ಹುಂಜಗಳನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *