ದಿನದ ಅಪರಾಧಗಳ ಪಕ್ಷಿನೋಟ 30 ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 29.09.2020 ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

 ಎನ್‌.ಡಿ.ಪಿ.ಎಸ್‌  ಕಾಯ್ದೆ : 01

ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಾರಿಕುಪ್ಪಂನ ಕೃಷ್ಣಗಿರಿ ಲೈನಿನಲ್ಲಿರುವ ಪೌಳಿ ಎಂಬುವರ ಮನೆಯ ಕಾಂಪೌಂಡ್‌ನಲ್ಲಿ ಭೂಮಿಯ ಒಳಗೆ ಸುಮಾರು 150 ಕೆ.ಜಿ ಗೂ ಹೆಚ್ಚಿನ ತೂಕದ  ಗಾಂಜಾ ಮೂಟೆಗಳನ್ನು ಪೌಳಿ, ಪಲ್ಲುರಾಜಾ, ಜೋಸೆಫ್, ವಸಂತ್ ಬಿನ್ ಮುನಿಸ್ವಾಮಿ, ಕಾರ್ತಿಕ್, ಮುರಳಿ, ಪುಷ್ಪರಾಣಿ ಕೋಂ ಜೋಸೆಫ್ ರವರು ಹುದುಗಿಸಿಟ್ಟು  ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಿನಾಂಕ.29.09.2020 ರಂದು ಮದ್ಯಾಹ್ನ 12.00 ಗಂಟೆಗೆ ದೂರುದಾರರಾದ ಶ್ರೀ. ಬಿ.ವಿ ವೆಂಕಟೇಶಪ್ಪ ಹೆಚ್.ಸಿ 103 ಮತ್ತು ಶ್ರೀ. ರಮೇಶ್, ಹೆಚ್.ಸಿ 130 ರವರು ಹೋಗಿ ನೋಡಲಾಗಿ, ಭೂಮಿಯನ್ನು ಹೊಸದಾಗಿ ಅಗೆದು ಅದರ ಮೇಲೆ ಕಸ ಹಾಕಿ ಮುಚ್ಚಿರುವುದು ಕಂಡುಬಂದಿರುತ್ತದೆಂದು ದೂರು ನೀಡಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೇಣು ಬಿನ್ ಬೆನ್ನಿ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಹೆಂಡತಿ ಶ್ರೀಮತಿ. ವಿಜಯಮ್ಮ, 42 ವರ್ಷ ರವರು ದಿನಾಂಕ. 18.09.2020 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ  ಮನೆಯಿಂದ ಕಾಣೆಯಾಗಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯಲಕ್ಷ್ಮೀ, ಎನ್.ಟಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರ ಗಂಡ ಸುರೇಶ್ ಕುಮಾರ್, 39 ವರ್ಷ ರವರಿಗೆ ಒಂದು ತಿಂಗಳಿಂದ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದು, ದಿನಾಂಕ 28-೦9-2020 ರಂದು ಸುರೇಶ್ ಕುಮಾರ್ ರವರು ಬೆಮಲ್ ಕಾರ್ಖಾನೆಗೆ ಹೋಗಿ ಇ.ಎಂ ಡಿವಿಜನ್ ನಲ್ಲಿರುವ ಸ್ಟೋರ್ ಬಳಿ ಕೆಲಸ ಮಾಡುತ್ತಿದ್ದಾಗ ರಾತ್ರಿ 8-45 ಗಂಟೆಯಲ್ಲಿ ತಲೆ ಸುತ್ತಿದಂತಾಗಿ ನೆಲದ ಮೇಲೆ ಕುಸಿದು ಕೆಳಗೆ ಬಿದ್ದಿದ್ದು, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *