ದಿನದ ಅಪರಾಧಗಳ ಪಕ್ಷಿನೋಟ 30 ನೇ ಮೇ 2019

 –ಹಲ್ಲೆ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಂಜಿತ್‌ಕುಮಾರ್‌ ಬಿನ್ ಮನೋಹರ್‌, ಫಿಶ್‌ ಲೈನ್‌, ಉರಿಗಾಂಪೇಟೆ, ಕೆ.ಜಿ.ಎಫ್‌ ರವರು ತಮ್ಮ ದಿಲೀಪ್ ರವರೊಂದಿಗೆ ದಿನಾಂಕ.28.05.2019 ರಂದು ರಾತ್ರಿ 8-30 ಗಂಟೆಯಲ್ಲಿ  ಎಸ್.ಎಂ. ಹೋಟೆಲ್ ಗೆ ಹೋಗಿದ್ದಾಗ, ಸುನೀಲ್ ಮತ್ತು ವಿಘ್ನೇಶ್ ರವರು ದಿಲೀಪ್ ಬಳಿ ಹೋಗಿ, 10 ದಿನಗಳ ಹಿಂದೆ ಜಗಳ ಮಾಡಿದ್ದೆ, ಈಗ ಬಾ ನಾಗಮ್ಮ ದೇವಸ್ಥಾನದ ಬಳಿ ತಮಟೆ ಹೊಡೆಯೋಣವೆಂತ ಕರೆದಿದ್ದು, ಆಗ ದಿಲೀಪ್ ನಿರಾಕರಿಸಿದ್ದರಿಂದ ಸುನೀಲ್ ಮತ್ತು ವಿಘ್ನೇಶ್ ರವರು ಕೆಟ್ಟ ಮಾತುಗಳಿಂದ ಬೈದು, ಹೊಡೆಯಲು ಹೋಗಿದ್ದು, ದಿಲೀಪ್‌ ಅಲ್ಲಿಂದ ಹೋಗಿ ದೂರುದಾರರಿಗೆ ತಿಳಿಸಿದ್ದು, ದೂರುದಾರರು ಸುನೀಲ್ ಮತ್ತು ವಿಘ್ನೇಶ್ ರವರನ್ನು ವಿಚಾರಣೆ ಮಾಡಲು 9-30 ಗಂಟೆಗೆ ಎಸ್.ಎಂ. ಹೋಟೆಲ್ ಬಳಿ ಹೋಗಿ ಸುನೀಲ್ ಮತ್ತು ವಿಘ್ನೇಶ್ ರವರನ್ನು ಕೇಳಿದಾಗ ಆರೋಪಿಗಳು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ಲೇಜರ್ ಬ್ಲೇಡ್ ನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *