ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 29.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಸಾಧಾರಣ ಕಳ್ಳತನ : 01
ಅಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಜಯ್ ಬಿನ್ ಉಯದ್ ಕುಮಾರ್, ಕಣ್ಣಯ್ಯ ಕಾಂಪೌಂಡ್, ಆಂಡ್ರಸನ್ಪೇಟೆ, ಕೆ.ಜಿ.ಎಫ್ ರವರು CT-110 ದ್ವಿಚಕ್ರ ವಾಹನ ತಾತ್ಕಾಲಿಕ ನೊಂದಣಿ ಸಂಖ್ಯೆ KA2020-T/R2960BK ನ್ನು ದಿನಾಂಕ 25.01.2021 ರಂದು ಮಧ್ಯಾಹ್ನ 12.30 ಗಂಟೆಯಲ್ಲಿ ಆಂಡ್ರಸನ್ಪೇಟೆಯ ಓಡ್ಯಾನಿಯಲ್ ರಸ್ತೆಯಲ್ಲಿರುವ ಏತ್ ಕಾರ್ ಹೋಟಲ್ ಮುಂದೆ ನಿಲ್ಲಿಸಿ, ಹೋಟೆಲ್ ಒಳಗೆ ಹೋಗಿ ಊಟ ಮಾಡಿ, ನಂತರ ಮಧ್ಯಾಹ್ನ ಸುಮಾರು 1.00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ.
– ರಸ್ತೆ ಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಮುನಿಸ್ವಾಮಪ್ಪ, ಜುಂಜನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ಹಾಗೂ ಬಾಮೈದ ಶೇಖರ್ಬಾಬು ರವರು ದಿನಾಂಕ 28.01.2021 ರಂದು ರಾತ್ರಿ 11.30 ಗಂಟೆಯಲ್ಲಿ ಅಶೋಕ್ ಲೈಯ್ ಲ್ಯಾಂಡ್ ಟೆಂಪೋ ಸಂಖ್ಯೆ ಕೆಎ-40-ಎ-2215 ರ ವಾಹನವನ್ನು ಶೇಖರ್ ಬಾಬು ರವರು ಚಲಾಯಿಸಿಕೊಂಡು ಬೂದಿಕೋಟೆ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿ ಮಾಗೊಂದಿ ಗೇಟ್ ಬಸ್ ಸ್ಟಾಂಡ್ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದರಿಂದ ವಾಹನವು ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಹೊಡೆದಿದ್ದರಿಂದ ವಾಹನದಲ್ಲಿ ಕುಳಿತಿದ್ದ ದೂರುದಾರರಿಗೆ ರಕ್ತಗಾಯವಾಗಿರುತ್ತದೆ.