ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 29.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
ಎಸ್.ಸಿ./ಎಸ್.ಟಿ ಕಾಯ್ದೆ: 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 29.08.2020 ರಂದು ಬೆಳಿಗ್ಗೆ 8.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ಶಿವರಾಮಪ್ಪ, ೫೦ ವರ್ಷ, ಕೆ.ಸಿ.ರೆಡ್ಡಿಗಾಂಡ್ಲಹಳ್ಳಿ, ಕ್ಯಾಸಂಬಳಿ ಹೋಬಳಿ ರವರು ತಮ್ಮ ಗ್ರಾಮದ ಬಳಿ ಇರುವ ಶ್ರೀ ಮಾರಿಯಮ್ಮ ದೇವಾಲಯದ ಪಕ್ಕದಲ್ಲಿರುವ ಸತ್ಯಮೂರ್ತಿ ರವರ ಜಮೀನಿನ ಖಾತೆ ನಂಬರ್ 62 ರ ಜಮೀನಿನ ಕಾಂಪೌಂಡ್ ಗೆ ಸತ್ಯ ಮೂರ್ತಿ ರವರು ಕೂಲಿ ಕೆಲಸದವರನ್ನು ಇಟ್ಟು ಕಲ್ಲುಕೂಚುಗಳನ್ನು ನಾಟಿ ಮಾಡಿಸುತ್ತಿದ್ದರೆಂದೂ, ಆಗ ಅಲ್ಲಿಗೆ ಆರೋಪಿಳಾದ ಮಂಜುನಾಥರೆಡ್ಡಿ ಮತ್ತು ಚಂದ್ರಾರೆಡ್ಡಿ ರವರುಗಳು ಪಿರ್ಯಾದಿದಾರರ ಬಳಿ ಬಂದು ಏಕೆ ಕಲ್ಲುಗಳನ್ನು ನಾಟಿದೀರಿ ಎಂದು ತೆಲಗು ಭಾಷೆಯಲ್ಲಿ ಕೆಟ್ಟ ಮಾತುಗಳಿಂದ ಬೈದನೆಂದು, ಆಗ ಪಿರ್ಯಾದಿದಾರರು “ ಇದರಲ್ಲಿ ನಿಮಗೇನು ಕೆಲಸ, ನಮ್ಮ ಜಮೀನಿನಲ್ಲಿ ನಾವು ನಾಟಿ ಮಾಡುತ್ತೇವೆಂದು” ಹೇಳಿದ್ದು, ಆಗ ಆರೋಪಿ ಮಂಜುನಾಥರೆಡ್ಡಿ ರವರು “ ಈ ಊರಿಗೆಲ್ಲ ಜಮೀನು ಕೊಟ್ಟಿರುವುದು ನಾವೆ, ನೀವು ನಮ್ಮ ಮಾತಿಲ್ಲದೆ ಹೇಗೆ ಕಲ್ಲು ಕೂಚಗಳನ್ನು ನಾಟಿ ಮಾಡುತ್ತಿದ್ದಿಯಾ” ಎಂದು ಬೈದು ಪಿರ್ಯಾದಿದಾರರನ್ನು ಕೈಗಳಿಂದ ಹೊಡೆದು, ಒಂದು ಸೈಜ್ ಕಲ್ಲನ್ನು ತೆಗೆದುಕೊಂಡು ಪಿರ್ಯಾದಿದಾರರ ಎಡ ಕಾಲಿನ ಮೊಣಕಾಲಿನ ಮೇಲೆ ಹಾಕಿ, ಆರೋಪಿಗಳು ಪಿರ್ಯಾದಿದಾರರಿಗೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿರುತ್ತಾರೆಂದೂ ದೂರು ನೀಡಿರುತ್ತಾರೆ.