ದಿನದ ಅಪರಾಧಗಳ ಪಕ್ಷಿನೋಟ 30ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 29.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಇತರೆ : 03

ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಭಾರತದ್ಯಾಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ತುರ್ತು ಘೋಷಣೆ ಮಾಡಿದ್ದು, ಈ ಸಂಬಂಧ ಆದೇಶವನ್ನು ಉಲ್ಲಂಘನೆ ಮಾಡಿರುವ ಬಗ್ಗೆ 3 ಪ್ರಕರಣ ದಾಖಲಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆ – ದಿನಾಂಕ 29.03.2020 ರಂದು ಈ ಕೇಸಿನ ಆರೋಪಿ ಶ್ರೀನಿವಾಸ, ಸೋರೆಗೌಡನಕೋಟೆ, ಬಂಗಾರಪೇಟೆ ರವರು ನೇರಳೆಕೆರೆ ಗೇಟ್ ಸಮೀಪ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ, ನಂದಿನಿ ಪಾರ್ಲರ್ ಟೀ ಅಂಗಡಿಯನ್ನು ತೆಗೆದುಕೊಂಡು, ಕಾಫಿ, ಟೀ, ಬಿಸಿ ಹಾಲನ್ನು ವ್ಯಾಪಾರ ಮಾಡುತ್ತಿದ್ದು, ಕರ್ನಾಟಕ ಸರ್ಕಾರವು ತುರ್ತು ಘೋಷಣೆಯ(ಲಾಕ್ ಡೌನ್) ಆದೇಶವನ್ನು ಹೊರಡಿಸಿದ್ದರೂ ಸಹ ಆರೋಪಿಯು ಅದನ್ನು ಉಲ್ಲಂಘನೆ ಮಾಡಿ, ರೋಗದ ಸೋಂಕು ಹರಡುವ ಸಂಭವವಿರುವುದೆಂದು ತಿಳಿದಿದ್ದರೂ ಸಹ ನಿರ್ಲಕ್ಷತನವನ್ನು ತೋರ್ಪಡಿಸಿ, ನಿಯಮವನ್ನು ಉಲ್ಲಂಘನೆ ಮಾಡಿದ್ದು, ಸದರಿ ಆರೋಪಿಯ ವಿರುದ್ದ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್ ರೆಡ್ಡಿ ರವರು ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತಾರೆ.

ಮಾರಿಕುಪ್ಪಂ ಪೊಲೀಸ್ ಠಾಣೆ – ದಿನಾಂಕ 29.03.2020 ರಂದು ಈ ಕೇಸಿನ ಪಿರ್ಯಾದಿದಾರರು ರಾಮಾಂಜಲಪ್ಪ, ಹೆಡ್ ಕಾನ್ಸ್‌ಟೇಬಲ್ ರವರು  ಕೋವಿಡ್-19 ನಿಷೇದಾಜ್ಞೆ ಜಾರಿ ಇರುವ ಪ್ರಯುಕ್ತ ಮಾರಿಕುಪ್ಪಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಂಜೆ 4.30 ಗಂಟೆಯ ಸಮಯದಲ್ಲಿ ವಾಸನ್ ವೃತ್ತದ ಬಳಿ ಇರುವ ಅರಳಿ ಮರದ ಕೆಳಗೆ ಆರೋಪಿಗಳಾದ ಲೋಕೇಶ್, ನಾರ್ತ್ ಗಿಲ್ಬರ್ಟ್‌, ಮಾರಿಕುಪ್ಪಂ, ಪ್ರಭು, ವೆಸ್ಟ್‌ ಗಿ‌ಲ್ಬರ್ಟ್‌ ಮಾರಿಕುಪ್ಪಂ, ಮತ್ತು ದೀಪಕ್‌, ಪ್ರಾಂಕ್‌ & ಕೋ, ಮಾರಿಕುಪ್ಪಂ ವಾಸಿರವರು ಮತ್ತು ಇತರೆ 3 ಜನರು ಆರೋಪಿಗಳನ್ನು ಸೇರಿ ಓಟ್ಟು 6 ಜನರು ಕೋವಿಡ್-19 ಪ್ರಯುಕ್ತ ನಿಷೇದಾಜ್ಞೆ ಜಾರಿ ಇದೆ ಎಂದು ತಿಳಿದಿದ್ದರು ಸಹ ಸದರಿ ಆದೇಶವನ್ನು ಉಲ್ಲಂಘನೆ ಮಾಡಿ ಗುಂಪು ಕಟ್ಟಿಕೊಂಡು ಅನವಶ್ಯಕತೆ ಚರ್ಚೆಯಲ್ಲಿ ತೊಡಗಿದ್ದವರು ತಿಳಿ ಹೇಳಿದ್ದರು ಸಹ ಪುನಃ ಅದೇ ಸ್ಥಳದಲ್ಲಿದಿದ್ದರಿಂದ ಸದರಿಯವರು ಸರ್ಕಾರ ಹಾಗು ಕೋಲಾರ ಜಿಲ್ಲಾಧಿಕಾರಿಯವರ ಕೋವಿಡ್- 19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೇಯನ್ನು ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದರಿಂದ ಇವರ ವಿರುದ್ದ  ಕ್ರಮ ಜರುಗಿಸಿರುತ್ತಾರೆ.

ಉರಿಗಾಂ ಪೊಲೀಸ್ ಠಾಣೆ – ಈ ಕೇಸಿನ ಪಿರ್ಯಾದಿದಾರರಾದ ಶ್ರೀ ಡಿ.ಡಿ ದೇವಕುಮಾರ್, ಎ.ಎಸ್.ಐ ಉರಿಗಾಂ ಪೊಲೀಸ್ ಠಾಣೆ ರವರು ದಿನಾಂಕ:29.03.2020 ರಂದು ಬೆಳಿಗ್ಗೆ 6.30 ಗಂಟೆಯಲ್ಲಿ ಉರಿಗಾಂ ಪೊಲೀಸ್ ಠಾಣಾ ಸರಹದ್ದಿನ ಮಲಯಾಳಿ ಗ್ರೌಂಡ್ ನಲ್ಲಿ ನೂತನವಾಗಿ ಏರ್ಪಾಟು ಮಾಡಿರುವ ತರಕಾರಿ ಮಾರುಕಟ್ಟೆಯ ಸಮೀಪ ಗಸ್ತಿನಲ್ಲಿರುವಾಗ ರಾಬರ್ಟ್ ಸನ್ ಪೇಟೆ- ಉರಿಗಾಂ ಮುಖ್ಯ ರಸ್ತೆಯಲ್ಲಿ ಆರೋಪಿ ಉಮರ್‌ ಫಾರೂಕ್, ಬೋರಿಲಾಲ್‌ಪೇಟೆ, ಕೆ.ಜಿ.ಎಫ್ ರವರು ಕೋಲಾರ ಜಿಲ್ಲಾಧಿಕಾರಿಗಳು ದಿನಾಂಕ: 22.03.2020 ರಿಂದ 14.04.2020 ರವರೆಗೆ ಕರೋನ ವೈರೆಸ್ ತಡೆಗಟ್ಟಲು ಜಿಲ್ಲೆಯಾದ್ಯಂತ ಕರ್ಪ್ಯೂವಿಧಿಸಿ ಆಧೇಶಿದ್ದರೂ ಸದರಿ ಆಧೇಶವನ್ನು ಉಲ್ಲಂಘನೆ ಮಾಡಿ ಟಿ. ಮಾರಾಟ ಮಾಡುತ್ತಾ ಪ್ರಾಣಕ್ಕೆ ಅಪಾಯಕಾರಿ ಕರೋನಾ ವೈರಸ್ ಹರಡುವ ಸಂಭವವಿರುವುದಾದಾಗಿ ತಿಳಿದೂ ಒಂದಕ್ಕಿಂತ ಹೆಚ್ಚು ಜನರನ್ನು ಗುಂಪು ಗೂಡಿಸಿಕೊಂಡಿದ್ದು ಹಾಗೂ ಅಪಾಯಕಾರಿ ರೋಗದ ಸೋಂಕನ್ನು ಹರಡಲು ಉದ್ದೇಶ ಪೂರ್ವಕವಾಗಿ ಟೀ ಮಾರಾಟ ಮಾಡಿರುತ್ತಾನೆ, ಸದರಿ ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತಾರೆ.

Leave a Reply

Your email address will not be published. Required fields are marked *