ದಿನದ ಅಪರಾಧಗಳ ಪಕ್ಷಿನೋಟ 30ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:29.01.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಅಪಹರಣ :  01

ಚಾಂಪಿಯನ್ ರೀಪ್ಸ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ಶ್ರೀಮತಿ ಜಯಕುಮಾರಿ ಕೋಂ ಡಿ ರವಿ , 36 ವರ್ಷ, ಎಲ್ ಬ್ಲಾಕ್, ಚಾಂಪಿಯನ್ ರೀಪ್ಸ್ ಕೆ.ಜಿ.ಎಫ್ ರವರ ಮಗನಾದ ಆರ್ ರಾಜನ್ @ ಎಭಿನೇಷ್ ಸುಮಾರು 15 ದಿನದಿಂದ ಸರಿಯಾಗಿ ಶಾಲೆಗೆ ಹೋಗದೆ ಇದ್ದುದ್ದರಿಂದ ದಿನಾಂಕ: 27.01.2020 ರಂದು ಬೆಳಿಗ್ಗೆ ತಾನೇ ಶಾಲೆಯಲ್ಲಿ ಬಿಟ್ಟು ಬಂದಿರುತ್ತಾರೆ. ಆತ ಶಾಲೆಯಿಂದ ವಾಪಸ್ಸು ಬಂದು ಎಂದಿನಂತೆ ಇರುತ್ತಾನೆ, ದಿನಾಂಕ:28.01.2020 ರಂದು ಬೆಳಿಗ್ಗೆ 6-10 ಗಂಟೆಯ ಸಮಯದಲ್ಲಿ ತನ್ನ ಮಗ ಆರ್.ರಾಜನ್ @ ಎಭಿನೇಷ್ ರವರು ಎಂದಿನಂತೆ ಎದ್ದು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ತನ್ನ ಮಗ ಆರ್.ರಾಜನ್ @ ಎಭಿನೇಷ್ ರವರ ಪತ್ತೆಯ ಬಗ್ಗೆ ಆತನ ಸ್ನೇಹಿತರ ಮನೆಗಳಲ್ಲಿ , ಅಕ್ಕಪಕ್ಕದ ಮನೆಗಳಲ್ಲಿ ಮತ್ತು ನೆಂಟರಿಷ್ಟರ ಮನೆಗಳಲ್ಲಿ ಇದುವರೆಗೂ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಯಾರೋ ಆತನನ್ನು ಅಪಹರಿಸಿಕೊಂಡು ಹೋಗಿರಬಹುದು ಎಂದು ಗುಮಾನಿ ಇರುತ್ತದೆ. ಕಾಣೆಯಾಗಿರುವ ತನ್ನ ಮಗನಾದ ಆರ್.ರಾಜನ್ @ ಎಭಿನೇಷ್ ರವರನ್ನು ಪತ್ತೆಮಾಡಿಕೊಡಲು ದೂರು ನೀಡಿರುತಾರೆ.

 

Leave a Reply

Your email address will not be published. Required fields are marked *