ದಿನದ ಅಪರಾಧಗಳ ಪಕ್ಷಿನೋಟ 30ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:29.09.2019 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.
– ಕೊಲೆ ಪ್ರಯತ್ನ: 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರಳಿಬಾಬು ಬಿನ್ ವೆಂಕಟೇಶ್‌, ಶ್ರೀರಾಮನಗರ, ಉರಿಗಾಂಪೇಟೆ, ಕೆ.ಜಿ.ಎಫ್ ರವರು 2018 ನೇ ಸಾಲಿನಲ್ಲಿ ಬೆಂಗಳೂರು ವಾಸಿ ವರಲಕ್ಷ್ಮಿ ಎಂಬುವರನ್ನು ಮದುವೆಯಾಗಿ, ಇಬ್ಬರಿಗೂ ಸಂಸಾರ ವಿಚಾರವಾಗಿ ಗಲಾಟೆಗಳಾಗಿದ್ದು, ದಿನಾಂಕ.29.09.2019 ರಂದು ಮದ್ಯಾಹ್ನ 3-15 ಗಂಟೆಗೆ ದೂರುದಾರರ ಹೆಂಡತಿಯ ಸಂಬಂಧಿಕರಾದ (1)ಬಾಲು, (2)ಪ್ರಭು, (3)ಭುವನೇಶ್ವರಿ, (4)ರೇಖಾ ಮತ್ತು (5)ಸುರೇಶ್ ರವರು ದೂರುದಾರರ ಮನೆ ಬಳಿ ಹೋಗಿ, ಜಗಳಮಾಡಿ ದೂರುದಾರರನ್ನು ಸಾಯಿಸುವ ಉದ್ದೇಶದಿಂದ ಕತ್ತಿ, ಕಲ್ಲು ಮತ್ತು ಕೈಗಳಿಂದ ಯಿಂದ ಗಾಯಾಳುವಿನ ಎಡತೊಡೆ, ಮೊಣಕಾಲಿನ ಕೆಳಗೆ & ಬಲಗೈ ಬೆರಳುಗಳ ಮೇಲೆ ಹೊಡೆದು ಹೊಡೆದು ನೋವುಂಟುಪಡಿಸಿರುತ್ತಾರೆ.

– ರಸ್ತೆ ಅಪಘಾತಗಳು :  01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಿರಣ್‌ ಪೌಲ್ ಬಿನ್ ಜಗತ್‌ ರಾಮ್‌ಗಿರಿ, ಮಹೇಶ್‌ಪುರಂ, ಉತ್ತರಪ್ರದೇಶ ರವರು ದಿನಾಂಕ.28-09-2019 ರಂದು ರಾತ್ರಿ 7-45 ಗಂಟೆಯಲ್ಲಿ ಬಂಗಾರಪೇಟೆ-ಕೆ.ಜಿ.ಎಫ್ ಮುಖ್ಯರಸ್ತೆ, ಬೆಮಲ್ ಕಾರ್ಖಾನೆಯ ಸರ್ವೀಸ್ ಟ್ರೈನೀಸ್  ಹಾಸ್ಟಲ್ ನ ಎದುರುಗಡೆ ನಡೆದುಕೊಂಡು ಹೋಗುತ್ತಿರುವಾಗ,  ಹಿಂಬದಿಯಿಂದ ಅಂದರೆ ಕೆ.ಜಿ.ಎಫ್. ಕಡೆಯಿಂದ ಹರೀಶ್ ಎಂಬುವರು ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ ಸಂಖ್ಯೆ KA07-V.0354 ಅನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಅಪಘಾತಪಡಿಸಿದ ಪರಿಣಾಮ, ದೂರುದಾರರಿಗೆ ಗಾಯವಾಗಳಾಗಿರುತ್ತೆ.

– ಮೋಸ/ವಂಚನೆ : 01

ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅಜಿತ್‌ ಬಿನ್ ಗೋಪಿ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಫೇಸ್ ಬುಕ್ ನಲ್ಲಿ ಲಿಂದಾ ಬ್ರೆಕ್ಸ್ ಎಂಬುವರು ಪರಿಚಯವಾಗಿ ದಿನಾಂಕ.12.08.2019 ರಂದು +447926608820 ನಿಂದ ಕರೆ ಮಾಡಿ, ಸ್ನೇಹಕ್ಕೆ ಗುರುತಾಗಿ ಒಂದು ಗಿಫ್ಟ್ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿ ಅದನ್ನು ಗೂಗಲ್ ನಲ್ಲಿ ಟ್ರಾಕ್ ಮಾಡಿ ಮಾಹಿತಿ ಪಡೆಯಲು ID:https://doorpointexpress.com/trackingphp, Tracking No.AWB369517538697 ನ್ನು ನೀಡಿ, ನಂತರ ದಿನಾಂಕ.13.08.2019 ರಂದು ಮೊ.ನಂ. 9319978967 ನಿಂದ ಕರೆ ಮಾಡಿ, ಪಾರ್ಸೆಲ್ ದೆಹಲಿಯ ಇಂದಿರಾಗಾಂಧಿ ಏರ್ ಫೋರ್ಟ್ ಗೆ ಬಂದಿದ್ದು, ಅದಕ್ಕೆ ಟ್ಯಾಕ್ಸ್ ಪೇ ಮಾಡಬೇಕು ಎಂತ ತಿಳಿಸಿ ಟ್ಯಾಕ್ಸ್ ಮೊತ್ತ 27,500/- ರೂ ಮತ್ತು 98,700/- ರೂಗಳನ್ನು ಎಸ್.ಬಿ.ಐ ಬ್ಯಾಂಕ್ ಖಾತೆ ನಂ.33200395279 ಮತ್ತು ಕೆನರಾ ಬ್ಯಾಂಕ್ ಖಾತೆ ನಂ.3955101006894 ಪಾವತಿಸಲು ಸೂಚಿಸಿದ್ದು, ಅದರಂತೆ  ದಿನಾಂಕ.13.08.2019 ರಂದು 27,500/- ರೂಳನ್ನು ದಿನಾಂಕ.14.08.2019 ರಂದು 98,700/- ರೂಗಳನ್ನು ವರ್ಗಾವಣೆ ಮಾಡಿಸಿಕೊಂಡು ದೂರುದಾರರಿಗೆ ಪಾರ್ಸೆಲ್ ಕಳುಹಿಸದೇ ಹಣವನ್ನು ವಾಪಸ್ಸು ಮಾಡದೇ ಮೋಸ ಮಾಡಿರುತ್ತಾರೆ.

– ಹಲ್ಲೆ : 03

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ವಿನೋದ್ ಬಿನ್ ರಮೇಶ್, ನ್ಯೂ ಮಿಲ್ ಬ್ಲಾಕ್, ಉರಿಗಾಂ, ಕೆ.ಜಿ.ಎಫ್‌ ರವರು ದಿನಾಂಕ:28.09.2019 ರಂದು ಸಂಜೆ 5.30 ಗಂಟೆಯಲ್ಲಿ ಉರಿಗಾಂ ನ್ಯೂ ಮಿಲ್ ಬ್ಲಾಕಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದಾಗ,  ಮೆರವಣಿಗೆಗೆ ಅಡ್ಡ ಬರುವ ಮರದ ಕೊಂಬೆಗಳನ್ನು ಕಡಿಯುತ್ತಿದ್ದು, ಸಂತೋಷ್ ರವರ ಮನೆಯ ಸಮೀಪ ಮರದ ಕೊಂಬೆಗಳನ್ನು ಕಡೆಯುತ್ತಿದ್ದಾಗ, ಸಂತೋಷ್ ದೂರುದಾರರನ್ನು ಕೆಟ್ಟಮಾತುಗಳಿಂದ ಬೈದು, ಕಬ್ಬಿಣದ ರಾಡಿನಿಂದ  ಹೊಡೆದು ರಕ್ತಗಾಯಪಡಿಸಿದ್ದು, ವಿಜಯ್ ಕೈಗಳಿಂದ ಹೊಡೆದಿರುತ್ತಾನೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಸಂತ್‌ ಕುಮಾರ್‌ ಬಿನ್ ತಂಗವೇಲು, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ತಾಯಿ ಶ್ರೀಮತಿ ವಸಂತ ದಿನಾಂಕ 27.09.2019 ರಂದು ರಾತ್ರಿ 10.30  ಗಂಟೆಗೆ   ಊಟ  ತೆಗೆದುಕೊಂಡು ಕಣ್ಣನ್ ಕಾಂಪೌಡ್, ಓ ಡ್ಯಾನಿಯಲ್‌ ರಸ್ತೆಯಲ್ಲಿರುವ  ಮನೆಯ ಬಳಿ ಹೋದಾಗ, ಶಿವಗಾಮಿ ಮತ್ತು ಹರಿ ರವರು  ಮನೆ ಖಾಲಿ ಮಾಡುವಂತೆ ದೂರುದಾರರೊಂದಿಗೆ ಜಗಳ ಕಾದು ಕೆಟ್ಟ  ಮಾತುಗಳಿಂದ  ಬೈದು,  ಮರದ  ರೀಪರ್ ನಿಂದ   ಹೊಡೆದಿದ್ದು,  ಅಡ್ಡ ಬಂದ  ದೂರುದಾರರ  ತಾಯಿ  ವಸಂತ  ರವರನ್ನು ಸಹ  ಮರದ ರೀಪರ್ ನಿಂದ  ಹೊಡೆದು ಗಾಯಪಡಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಹಸೀನಾ ಕೊಂ ಅಸ್ಲಾಂ ಪಾಷಾ, ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಿಗೆ 15 ದಿನಗಳ ಹಿಂದೆ ಅಬ್ದುಲ್‌ ರಜಾಕ್‌ ಎಂಬುವರು ಪೋನ್ ಮಾಡಿ ಕೆಟ್ಟದಾಗಿ ಮಾತನಾಡಿದ್ದ ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆ ವಿಚಾರವನ್ನು  ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ 28.09.2019 ರಂದು ಮಧ್ಯಾಹ್ನ 2.30 ಗಂಟೆಯಲ್ಲಿ ದೂರುದಾರರು ಮನೆಯ ಬಳಿ ಇದ್ದಾಗ, ಮಜಿದ್, ಅಬ್ದುಲ್ ರಜಾಕ್, ಅಸೀನ್‌, ಆಸ್ಮಾ, ಅಸ್ಲಾಂ ಮತ್ತು ಮುಬೀನಾ ರವರು ದೂರುದಾರರೊಂದಿಗೆ ಜಗಳ ಮಾಡಿ, ದೂರುದಾರರ ಗಂಡ ಅಸ್ಲಂ ಪಾಷ ರವರಿಗೆ ಕೈಗಳಿಂದ, ಇಟ್ಟಿಗೆ ಕಲ್ಲಿನಿಂದ ಹೊಡೆದಿದ್ದು, ಬಿಡಿಸಲು ದೂರುದಾರರು ಹೋದಾಗ, ತೋರು ಬೆರಳಿಗೆ ಕಚ್ಚಿ ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *