ದಿನದ ಅಪರಾಧಗಳ ಪಕ್ಷಿನೋಟ 30ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  29.06.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಜೂಜಾಟ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:29/06/2020 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ.ಜಗದೀಶ್ ರೆಡ್ಡಿ ರವರು ಗಸ್ತಿನಲ್ಲಿದ್ದಾಗ ಠಾಣಾ ಸರಹದ್ದಿನ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದು, ಹೂವರಸನಹಳ್ಳಿ ಗ್ರಾಮದ ಸಮೀಪ ಆರೋಪಿಗಳಾದ ಹರೀಶ್, ಮೋಹನ್, ವಸಂತಕುಮಾರ್‍, ನಂದೀಶ, ಶಿವಕುಮಾರ್‍, ಬಸವರಾಜಕ, ಸಂತೋಷ, ಗೌತಂ , ಎಲ್ಲಾರು ಹೂವರಸನಹಳ್ಳಿ ಗ್ರಾಮ ರವರುಗಳು ಇಸ್ಪೀಟ್ ಎಲೆಗಳನ್ನು ಬಳಸಿಕೊಂಡು ಹಣವನ್ನು ಪಣಕ್ಕಿಟ್ಟು ಅಂದರ್ – ಬಾಹರ್ ಜೂಜಾಟವನ್ನು ಆಡುತ್ತಿದ್ದಾಗ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಜೂಜಾಟ ವಾಡಲು ಉಪಯೋಗಿಸುತ್ತಿದ್ದ ಒಂದು ಪ್ಲಾಸ್ಟಿಕ್ ಗೋಣಿ ಚೀಲ, 52 ಇಸ್ವೀಟ್ ಎಲೆಗಳು, ಹಾಗೂ ನಗದು ಹಣ 14,140/- ರೂ.ಗಳನ್ನು ಮಧ್ಯಾಹ್ನ 3.00 ರಿಂದ ಸಂಜೆ 4.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:26.06.2020 ರಂದು ಮದ್ಯಾಹ್ನ ಸುಮಾರು 12.15 ಗಂಟೆ ಸಮಯದಲ್ಲಿ ಈ ಕೇಸಿನ ಫಿರ್ಯಾದಿದಾರರು ಜೂನಿಯರ್‍ ಅಂತೋಣಿ, ನಾರ್ತ್‌ ಟ್ಯಾಂಕ್ ಬ್ಲಾಕ್, ಉರಿಗಾಂ ರವರ ಮಗನಾದ ಶ್ರೀ ರಾಜನ್ 41 ವರ್ಷ, ರವರು ರಾಬರ್ಟ್‌ಸನ್‌ಪೇಟೆಯ ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಪುನಃ ತಮ್ಮ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ. ನಂತರ ರಾಜನ್ ನನ್ನು ಈವರೆವಿಗೂ ಆತನ ಸ್ನೇಹಿತರ ಮತ್ತು ತಮ್ಮ ಸಂಬಂದಿಕರ ಮನೆಗಳಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ.

Leave a Reply

Your email address will not be published. Required fields are marked *