ದಿನದ ಅಪರಾಧಗಳ ಪಕ್ಷಿನೋಟ 29ನೇ ಜೂನ್ 2017 ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:29.06.2017  ರಂದು  ಬೆಳಿಗ್ಗೆ 10.00   ಗಂಟೆಯಿಂದ   ಸಂಜೆ 5.00  ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ಗಂಗಣ್ಣ, ವಡ್ಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ  ಕು.ಆರತಿ ರವರಿಗೆ ನಾರಾಯಣಸ್ವಾಮಿ ಬಿನ್ ಸಂಜೀವಪ್ಪ, ಜಂಗಹಳ್ಳಿ ಗ್ರಾಮ ಮಾಲೂರು ತಾಲ್ಲೂಕು ರವರೊಂದಿಗೆ ದಿನಾಂಕ. 27.05.2017 ರಂದು ಮದುವೆ ನಿಶ್ಚಯವಾಗಿದ್ದು, ಯಾರೋ ಯಾವುದೋ ಕಾರಣಗಳಿಂದ ನಾರಾಯಣಸ್ವಾಮಿ ರವರನ್ನು ಕೊಲೆ ಮಾಡಿ ರೈಲ್ವೆ ಹಳಿಯ ಮೇಲೆ ಬಿಸಾಡಿದ್ದು, ಈ ಬಗ್ಗೆ ಬೆಂಗಳೂರಿನ ದಂಡು ರೈಲ್ವೆ ಪೊಲೀಸರು ದೂರುದಾರರು, ದೂರುದಾರರ ಹೆಂಡತಿ ವೆಂಕಟಲಕ್ಷ್ಮಮ್ಮ ಹಾಗೂ ಕು.ಆರತಿ ರವರನ್ನು ಕರೆಯಿಸಿ ವಿಚಾರಣೆ ಮಾಡಿದ್ದು, ಅದೇ ರೀತಿ  ಮೃತ ನಾರಾಯಣಸ್ವಾಮಿ ರವರ ತಂದೆ ಸಂಜೀವಪ್ಪ,  ತಾಯಿ ವೆಂಕಟಲಕ್ಷ್ಮಮ್ಮ ಹಾಗೂ ಆತನ ಚಿಕ್ಕಪ್ಪ ರಾಜಣ್ಣ ರವರು ವಿಚಾರಣೆ ಸಮಯದಲ್ಲಿ ದೂರುದಾರರ ಕಡೆಯವರೇ ಕೊಲೆ ಮಾಡಿರುತ್ತಾರೆಂದು  ಆರೋಪಿಸಿದ್ದರಿಂದ ಕು.ಆರತಿ ರವರು  ಗ್ರಾಮದಲ್ಲಿ ಹಾಗೂ ಸಂಬಂದಿಕರ ಬಳಿ ಅವಮಾನವಾಯಿತೆಂದು ಮಾನಸಿಕವಾಗಿ ನೊಂದು  ದಿನಾಂಕ. 28.06.2017 ರಂದು ಸಂಜೆ 5.30 ಗಂಟೆ ಯಿಂದ 6.00 ಗಂಟೆ ಮಧ್ಯೆ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಸಿಮೆಂಟ್ ಶೀಟ್ ಗೆ ಅಳವಡಿಸುವ ಮರದ ತರಾಯಿಗೆ ಚೂಡಿದಾರಿನ ವೇಲ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *