ದಿನದ ಅಪರಾಧಗಳ ಪಕ್ಷಿನೋಟ 29ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:28.09.2019 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 – ಸಾಧಾರಣ ಕಳ್ಳತನ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನದೀಮ್‌ ಪಾಷಾ ಬಿನ್ ಮೊಹಮದ್ ಜಾವೀದ್, ಪಟೇಲ್‌ ಸ್ಟ್ರೀಟ್‌, ಉರಿಗಾಂಪೇಟೆ, ಕೆ.ಜಿ.ಎಫ್ ರವರು  ದಿನಾಂಕ. 23.09.2019 ರಂದು ರಾತ್ರಿ 7.30 ಗಂಟೆಗೆ  KA08-R5794 ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ಪಿಚ್ಛರ್ಡ್ ರಸ್ತೆಯ 2 ನೇ ಕ್ರಾಸ್ ನಲ್ಲಿರುವ ಶ್ರೀನಿವಾಸಚಾರಿ ಬಿಲ್ಡಿಂಗ್ ಮುಂದಿನ ರಸ್ತೆಯ ಅಂಚಿನಲ್ಲಿ ನಿಲ್ಲಿಸಿ ನಂತರ ರಾತ್ರಿ 8.00 ಗಂಟೆ ನೋಡಲಾಗಿ ಯಾರೋ ಕಳ್ಳರು ದ್ವಿಚಕ್ರ ವಾಹನವನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ. ಬೆಲೆ 20,000/- ರೂಗಳಾಗಿರುತ್ತೆ.

– ರಸ್ತೆ ಅಪಘಾತಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ನಳನಿ ಶ್ರೀದೇವಿ ಕೊಂ ಶಿವಕುಮಾರ್‌, ಕೆನಡೀಸ್ ಲೈನ್, ಉರಿಗಾಂ, ಕೆ.ಜಿ.ಎಫ್ ರವರ ಗಂಡ ಶಿವಕುಮಾರ್,  42 ವರ್ಷ ರವರು ದಿನಾಂಕ 21.09.2019 ರಂದು ಬೆಳಗಿನ ಜಾವ 4.00 ಗಂಟೆಯಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನ  ಸಂಖ್ಯೆ ಕೆಎ-08-ಎಲ್-3172 ನ್ನು ಅತಿವೇಗವಾಗಿ ಚಲಾಯಿಸಿಕೊಂಡು ಇಂದಿರಾನಗರದ ಸಮೀಪ ಹೋಗುತ್ತಿದ್ದಾಗ, ಯಾವುದೋ ಒಂದು ಜಾನುವಾರು ರಸ್ತೆಯಲ್ಲಿ ಅಡ್ಡಿಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ಶಿವಕುಮಾರ್ ರವರು ವಾಹನ ಸಮೇತ ಕೆಳಗೆ ಬಿದ್ದಿದ್ದರಿಂದ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ ಬೆಂಗಳೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಆಸ್ಮಾ ಕೊಂ ಆಸೇನ್, ಗೊಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 28.09.2019 ರಂದು ಮಧ್ಯಾಹ್ನ 2.30 ಗಂಟೆಯಲ್ಲಿ ಮನೆಯ ಬಳಿ ಇದ್ದಾಗ, ಅಸೀನಾ, ಅಕ್ರಂ ಮತ್ತು ತನ್ವೀರ್‌ ರವರು ಹಳೇ ದ್ವೇಷವನ್ನಿಟ್ಟುಕೊಂಡು ಜಗಳಮಾಡಿ ಸೈಯದ್ ಮಜೀದ್ ರವರಿಗೆ ಹೊಡೆದಿದ್ದು,  ಜಗಳ ಬಿಡಿಸಲು ದೂರುದಾರರು ಹೋದಾಗ ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *