ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 28.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಜೂಜಾಟ ಕಾಯ್ದೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:28-03-2021 ರಂದು ಮದ್ಯಾಹ್ನ 3:45 ಗಂಟೆಯಲ್ಲಿ ತೊಂಗಲಕುಪ್ಪ ಗ್ರಾಮದಿಂದ ಪೂರ್ವ ದಿಕ್ಕಿಗೆ ಕಾಲುದಾರಿಯಲ್ಲಿ ಪಲಾರ್ ನದಿಯ ಕಾಲುವೆಯ ದಡದಲ್ಲಿ ಮರದ ಕೆಳಗೆ ವೆಂಕಟೇಶ್, ಅಶ್ವಥ್, ಸುರೇಶ್, ಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ ಮತ್ತು ಲಚ್ಚಿರೆಡ್ಡಿ ಇಸ್ಪೀಟು ಎಲೆಗಳಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದವರನ್ನು ದೂರುದಾರರಾದ ಶ್ರೀ. ನವೀನ್, ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಹಿಡಿದುಕೊಂಡು, ಸ್ಥಳದಲ್ಲಿದ್ದ 52 ಇಸ್ಪಿಟು ಎಲೆಗಳು ಮತ್ತು 8,520/- ರೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರಾಜೇಶ್ವರಿ, ಫಿಟ್ಟರ್ಸ್ ಬ್ಲಾಕ್, ಕೋರಮಂಡಲ್ ಪೋಸ್ಟ್, ಕೆ.ಜಿ.ಎಫ್ ರವರ ದೊಡ್ಡಮ್ಮನ ಮಗ ಸುರೇಶ್ ಬಾಬು, 42 ವರ್ಷ ರವರಿಗೆ 6 ವರ್ಷಗಳ ಹೊಟ್ಟೆನೋವು ಬರುತ್ತಿದ್ದು, ಚಿಕಿತ್ಸೆ ಪಡೆದುಕೊಂಡಿದ್ದರೂ ವಾಸಿಯಾಗದೆ ಇದ್ದುದ್ದರಿಂದ, ದಿನಾಂಕ:27.03.2021 ರಂದು ಅತಿಯಾದ ಹೊಟ್ಟೆ ನೋವು ಬಂದಿದ್ದು ಆತನು ಅದನ್ನು ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಸಂಜೆ 5.30 ಗಂಟೆಯಲ್ಲಿ ಪಿಟ್ಟರ್ಸ್ ಬ್ಲಾಕ್ ನ ಮುತ್ತು ಎಂಬುವರ ಹೋಟೆಲ್ ಹಿಂಭಾಗದಲ್ಲಿ ಒಂದು ಮುಳ್ಳಿನ ಮರಕ್ಕೆ ಪ್ಲಾಸ್ಟೀಕ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.