ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಕ 28.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬಾಬು ಬಿನ್ ಕೃಷ್ಣಪ್ಪ, ಚೌಡೇಪಲ್ಲಿ ಗ್ರಾಮ, ಚಿತ್ತೂರು, ಆಂದ್ರಪ್ರದೇಶ ರವರ ಬಾಮೈದ ಬೀರೇಶ್, 32 ವರ್ಷ ರವರು ದಿನಾಂಕ 22-11-2020 ರಂದು ಸಂಜೆ 5.00 ಗಂಟೆಯಿಂದ 7.30 ಗಂಟೆಯ ಮದ್ಯೆ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-08-ಎಕ್ಸ್-9500 ನ್ನು ಜಯಮಂಗಲ ಕ್ರಾಸ್ ನಿಂದ ಘಟ್ಟ ಕಾಮದೇನಹಳ್ಳಿ ರಸ್ತೆ ಐಸಂದ್ರಮಿಟ್ಟೂರು ಗ್ರಾಮದ ಗೇಟ್ ಸಮೀಪ ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಹೋಗುವಾಗ ವಾಹನ ಸಮೇತ ಕೆಳಗೆ ಬಿದ್ದು ಗಾಯಗಳಾಗಿದ್ದು, ಚಿಕಿತ್ಸೆಗೆ ಎಂ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 28-11-2020 ರಂದು ಬೆಳಿಗ್ಗೆ 9.55 ಗಂಟೆಯಲ್ಲಿ ಬೀರೇಶ್ ರವರಿಗೆ ಚಿಕಿತ್ಸೆ ಪಲಕಾರಿಯಾಗದೇ ಮೃತ ಪಟ್ಟಿರುತ್ತಾರೆ.
– ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪ್ರೀತಿ ಕೊಂ ಶಂಕರ್ ಕುಮಾರ್, ಗೌತಮ್ನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ. 11.12.2019 ರಂದು ಶಂಕರ್ ಕುಮಾರ್ ರವರೊಂದಿಗೆ ವಿವಾಹವಾಗಿದ್ದು, ಮದುವೆ ಕಾಲದಲ್ಲಿ ದೂರುದಾರರ ಮನೆಯವರು ವರದಕ್ಷಿಣೆಯಾಗಿ 16 ಗ್ರಾಂ ಬಂಗಾರದ ಬ್ರಾಸ್ ಲೈಟ್, 16 ಗ್ರಾಂ ಬಂಗಾರದ ಕತ್ತಿನ ಚೈನ್, 4 ಗ್ರಾಂ ಬಂಗಾರದ ಉಂಗುರ ಕೊಟ್ಟು, ದೂರುದಾರರಿಗೆ ಬಂಗಾರದ ಕತ್ತಿನ ಹಾರ, ಬಂಗಾರದ ಉಂಗುರ, ಬಂಗಾರದ ಓಲೆ ಜುಮಕ್ಕಿ, ಮಾಟಿ ಕೊಟ್ಟಿದ್ದು, ನಂತರ ಶಂಕರ್ ಕುಮಾರ್ ರವರು 1 ಲಕ್ಷ 50 ಸಾವಿರ ನಗದು ಹಣ ಹಾಗೂ ದ್ವಿ-ಚಕ್ರವಾಹನವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ದೂರುದಾರರ ಮನೆಯವರು ದ್ವಿಚಕ್ರವಾಹನವನ್ನು ತೆಗೆದುಕೊಟ್ಟಿದ್ದು, 1,50,000/- ರೂ. ಬಾಕಿ ಇಟ್ಟುಕೊಂಡಿದ್ದರು. ನಂತರ ಶಂಕರ್ ಕುಮಾರ್ ಮತ್ತು ಕೌಸಲ್ಯ ರವರು ದೂರುದಾರರಿಗೆ ಬಾಕಿ 1,50,000/- ರೂ. ವರದಕ್ಷಣೆ ಹಣ ಕೊಟ್ಟಿಲ್ಲವೆಂದು ಪದೇಪದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿರುತ್ತಾರೆ.