ದಿನದ ಅಪರಾಧಗಳ ಪಕ್ಷಿನೋಟ 29ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 28.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ರಮಣಿ ಬಿನ್ ರಂಗಪ್ಪ, ಮಾರಿಕುಪ್ಪಂ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗ ಮಂಜುನಾಥ್, 25 ವರ್ಷ ರವರು ದಿನಾಂಕ 24.09.2020 ರಂದು ಬೆಳಗ್ಗೆ 11.00 ಗಂಟೆಯಲ್ಲಿ ಮನೆಯಿಂದ ಹೊದವರು  ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

ಇತರೆ01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ, ಪಿ.ಡಿ.ಓ, ಚಿನ್ನಕೋಟೆ ಗ್ರಾಮ ಪಂಚಾಯ್ತಿ ರವರು ನೀಡಿದ ದೂರಿನಲ್ಲಿ,  ಚಿನ್ನಕೋಟೆ ಗ್ರಾಮದ ವೆಂಕಟೇಶ್‌ ಮತ್ತು ಸುಬ್ರಮಣಿ ರವರು ದಿನಾಂಕ: 22-09-2020 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಖಾತೆ ಸಂಖ್ಯೆ: 123 ರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಚಿನ್ನಕೋಟೆ ಗ್ರಾಮದ ಖಾತೆ ನಂ: 122 ರಲ್ಲಿನ ಸರ್ಕಾರಕ್ಕೆ ಸೇರಿದ ಬೀದಿ ಮತ್ತು ರಸ್ತೆಯಲ್ಲಿ ಅತಿಕ್ರಮ ಪ್ರವೇಶಮಾಡಿ 45 ಅಡಿಗಳಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ದೂರುದಾರರು ಕಾಮಗಾರಿಯನ್ನು ನಿಲ್ಲಿಸುವಂತೆ ತಿಳಿಸಿದ್ದರೂ ಸಹ ಕಟ್ಟಡ ಕಾಮಗಾರಿ ಮುಂದುವರೆಸಿರುತ್ತಾರೆಂದು ದೂರು.

– ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುಳಾ, ತಮಟಮಾಕನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕ ರವರ ಗಂಡ ರವಿ, 45 ವರ್ಷ ರವರಿಗೆ ಮಧ್ಯಪಾನ ಮಾಡುವ ಚಟವಿದ್ದು, ಕುಡಿಯಲು ಕೈಸಾಲಗಳನ್ನು ಮಾಡಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28.09.2020 ರಂದು ಬೆಳಿಗ್ಗೆ 7.30 ಗಂಟೆಯಲ್ಲಿ ದೇವಪ್ಪ ರವರ ಜಮೀನಿನಲ್ಲಿರುವ ಮರದ ಕೊಂಬೆಗೆ ಸೀರೆಯಿಂದ ನೇಣು ಹಾಕಿಕಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

 

Leave a Reply

Your email address will not be published. Required fields are marked *