ದಿನದ ಅಪರಾಧಗಳ ಪಕ್ಷಿನೋಟ 29ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 28.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಸುಲಿಗೆ : -01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:28.04.2020 ರಂದು ದೂರುದಾರರಾದ ಶ್ರೀ. ಮುನಿಸ್ವಾಮಿ ಬಿನ್‌ ಮುನಿಯಪ್ಪ ಗುಂಡ್ಲಪಾಳ್ಯ ಗ್ರಾಮ ಮಾಸ್ತಿ ಹೋಬಳಿ ರವರು ನೀಡಿದ ದೂರಿನಲ್ಲಿ  ದೂರುದಾರರು ಅವರ ಗ್ರಾಮವಾದ ಗುಂಡ್ಲುಪಾಳ್ಯದಿಂದ ಶಿವು ಎಂಬುವರ ದ್ವಿಚಕ್ರ ವಾಹನ ಬಜಾಜ್ ಡಿಸ್ಕವರ್ ಸಂಖ್ಯೆ:ಕೆ.ಎ 08 ವಿ 9990 ಮತ್ತು ತನ್ನ ಚಿಕ್ಕಪ್ಪನ ಮಗಳ ಬಳಿ ಎಂ.ಐ ಮೊಬೈಲ್ ಪಡೆದುಕೊಂಡು ತನ್ನ ದೂರದ ಸಂಬಂದಿ ಹರೀಶ್ ರೊಂದಿಗೆ  ಕೆ.ಜಿ.ಎಫ್ ಪೆಟ್ರೋಲ್ ಬಂಕ್‌ಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಬರಲು ಎನ್.ಟಿ ಬ್ಲಾಕ್ ರಸ್ತೆಯಲ್ಲಿ ಬರುವಾಗ ರಸ್ತೆಯ ಬಗ್ಗೆ ಗೊಂದಲವಾಗಿ ಜಗುಲಿ ಮೇಲೆ ಕುಳಿತಿದ್ದ ವ್ಯಕ್ತಿಗೆ ಪೆಟ್ರೋಲ್ ಬಂಕ್‌ ಹೋಗಲು ದಾರಿ ಕೇಳಿದಾಗ ಅವರು ಮೈದಾನದ ಕಡೆ ತೋರಿಸಿದರು. ದೂರುದಾರರು ಅಲ್ಲಿಗೆ ಹೋದಾಗ  ಆರೋಪಿಗಳು ಎನ್.ಟಿ ಬ್ಲಾಕ್ ಸಾರ್ವಜನಿಕ ಶೌಚಾಲಯದ ಬಳಿ ಬಂದು ಒಬ್ಬ ವ್ಯಕ್ತಿ ಏಕಾಏಕಿ ದೂರುದಾರರ ಕತ್ತಿನ ಪಟ್ಟಿ ಹಿಡಿದು ವಾಹನದಿಂದ ಇಳಿಸಿ ಇನ್ನುಳಿದ ಇಬ್ಬರು  ಹಿಂಬದಿ ಕುಳಿತಿದ್ದ ಹರೀಶ್ನನ್ನು ಒಬ್ಬ ವ್ಯಕ್ತಿ ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದು, ಎಂ.ಐ ಮೊಬೈಲ್ ಪೋನ್ ಮತ್ತು ಹರೀಶ್ ಬಳಿ ಇದ್ದ ಮೊಬೈಲ್  ಮತ್ತು 200/- ರೂ ಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *