ದಿನದ ಅಪರಾಧಗಳ ಪಕ್ಷಿನೋಟ 29ನೇ ಜನವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:28.01.2020 ರಂದು     ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಮೋಸ/ವಂಚನೆ : 01

ಕೆ.ಜಿ.ಎಫ್ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ನಿತಿನ್ ಗೌಡ, ನೆರ್‍ನಹಳ್ಳಿ ಗ್ರಾಮ ಬಂಗಾರಪೇಟೆ ರವರು  ದಿನಾಂಕ.23.01.2020 ರಂದು ಸ್ನಾಪ್ ಡೀಲ್ ನಲ್ಲಿ ಒಂದು ಹೇರ್ ಡ್ರೈಯರ್ ನ್ನು ಆರ್ಡರ್ ಮಾಡಿದ್ದು, ಇದಾದ ಬಳಿಕ ದಿನಾಂಕ.25.01.2020 ರಂದು ದೂರುದಾರರ ಮೊಬೈಲ್ ಫೋನಿಗೆ XUV500 CAR ಲಕ್ಕಿ ಡ್ರಾ ಬಂದಿದೆ ಎಂದು ಆರೋಪಿ ಸಂದೇಶವನ್ನು ಕಳುಹಿಸಿ, ದೂರುದಾರರ ಬ್ಯಾಂಕ್ ಖಾತೆಗೆ 14,80,000/- ಮತ್ತು 15,40,000/- ರೂಪಾಯಿಗಳನ್ನು ಜಮೆ ಮಾಡಿರುವುದಾಗಿ ಸಂದೇಶವನ್ನು ಕಳುಹಿಸಿ ಹಣವನ್ನು ಬ್ಯಾಂಕಿನಲ್ಲಿ ಹೋಲ್ಡ್ ಮಾಡಿದ್ದು ಅದಕ್ಕೆ ಟಿ.ಡಿ.ಎಸ್ ಹಣವನ್ನು ಪಾವತಿಸಬೇಕೆಂದು ಸಂಧೇಶಗಳನ್ನು ಕಳುಹಿಸಿ ದಿನಾಂಕ.25.01.2020 ರಿಂದ ದಿನಾಂಕ.26.01.2020 ರ ವರೆಗೆ ದೂರುದಾರರ ಪ್ರಗತಿ ಕೃಷ್ಣ ಬ್ಯಾಂಕ್ ಖಾತೆಯಿಂದ 15700/- ರೂಪಾಯಿಗಳನ್ನು ಹಾಗೂ ಐ.ಸಿ.ಐ.ಸಿ ಐ ಬ್ಯಾಂಕ್ ಖಾತೆಯಿಂದ 45650/- ರೂಪಾಯಿಗಳು  ಮತ್ತು 27000/- ರೂಪಾಯಿಗಳು ಸೇರಿ ಒಟ್ಟು 88350/- ರೂಪಾಯಿಗಳನ್ನು ಆರೋಪಿ ಖಾತೆಗೆ ಜಮೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ. ಆರೋಪಿ ಪತ್ತೆಯಾಗಿರುವುದಿಲ್ಲ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ಈ ಕೇಸಿನ ಪಿರ್ಯಾದಿದಾರರಾದ ಗೋವಿಂದಪ್ಪ, ಕೊಮ್ಮೇನಹಳ್ಳಿ ಗ್ರಾಮ ಬಂಗಾರಪೇಟೆ ರವರ ಮಗನಾದ ನವೀನ್,  19 ವರ್ಷ ರವರಿಗೆ ಸುಮಾರು ಹದಿಮೂರು ವರ್ಷಗಳಿಂದ ಪಿಟ್ಸ್ ಖಾಯಿಲೆ ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ ಸಹ ವಾಸಿಯಾಗದೇ ಇದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 28.01.2020 ರಂದು ಬೆಳಿಗ್ಗೆಯಿಂದ ಮದ್ಯಾಹ್ನ ಸುಮಾರು 12.30 ಗಂಟೆ ಮದ್ಯೆ ತನ್ನ ಮನೆಯ ಷೀಟ್ ಗಳಿಗೆ ಹಾಕಿರುವ ಪೈಪ್ ಗೆ ಒಂದು ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

Leave a Reply

Your email address will not be published. Required fields are marked *