– ಹಲ್ಲೆ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಿಕೋಲಸ್ ಬಿನ್ ಆಂಥೋನಿ, ಸಿ ಟೈಲ್ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರು ದಿನಾಂಕ:22-12-2019 ರಂದು ರಾತ್ರಿ 07-45 ಗಂಟೆಯಲ್ಲಿ ಚಾಂಪಿಯನ್ ರೀಫ್ಸ್ ನ ಜಿ. ಬ್ಲಾಕ್ ಬಳಿ ನಡೆದುಕೊಂಡು ಹೋಗುತ್ತ್ತಿದ್ದಾಗ, ನರೇಶ್ ಕುಮಾರ್ ಮತ್ತು ಇತರೆ ಇಬ್ಬರು ದೂರುದಾರರೊಂದಿಗೆ ಗಲಾಟೆ ಮಾಡಿ, ಕೈಗಳಿಂದ, ಕೋಲಿನಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಲಿತಾ, ನ್ಯೂ ಪಟೇಲ್ ಸ್ಟ್ರೀಟ್, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಗಂಡನಾದ ಸುಬ್ರಮಣಿ, 40 ವರ್ಷ ರವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27.12.2019 ರಂದು ಸಂಜೆ 5.30 ಗಂಟೆಯಲ್ಲಿ ಮನೆಯ ಮೇಲ್ಚಾವಣೆಯ ಫ್ಯಾನ್ ಗೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.