ದಿನದ ಅಪರಾಧಗಳ ಪಕ್ಷಿನೋಟ 28 ನೇ ಜೂನ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 27.06.2020 ರಂದು ದಾಖಲಾಗಿರುವ

ಅಪರಾಧ ಪ್ರಕರಣಗಳ ವಿವರಗಳು.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ  ಪಾರ್ವತಮ್ಮ, ಗಾಜಗ ಗ್ರಾಮ ಬಂಗಾರಪೇಟೆ ವಾಸಿ ರವರ ಗಂಡನಾದ ನಾರಾಯಣಪ್ಪ, ೫೦ ವರ್ಷ ರವರಿಗೆ ಆಗಾಗ್ಗ ಹೊಟ್ಟೇನೋವು ಬರುತ್ತಿದ್ದು, ಚಿಕಿತ್ಸೆಯನ್ನು ಪಡೆದುಕೊಂಡು ಮಾತ್ರೆಗಳನ್ನು ಸೇವಿಸುತ್ತಿದ್ದರೂ ಸಹ ಗುಣಮುಖವಾಗದೇ ಇದ್ದು, ಹಾಗೂ ಇತ್ತೀಚೆಗೆ ನಾರಾಯಣಪ್ಪ ರವರು ಮದ್ಯ ಸೇವನೆ ಮಾಡುವುದನ್ನು ಬಿಟ್ಟಿದ್ದರಿಂದ ಹಾಗೂ ಹೊಟ್ಟೆ ನೋವಿನ ಬಾದೆ ತಾಳಲಾಗದೇ ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 26.06.2020 ರಂದು ರಾತ್ರಿ ಸುಮಾರು 11.30 ಗಂಟೆ ಮದ್ಯೆ ತಮ್ಮ ಮನೆಯ ಬಳಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *