ದಿನದ ಅಪರಾಧಗಳ ಪಕ್ಷಿನೋಟ 28 ನೇ ಅಕ್ಟೋಬರ್‌ 2019

– ಇತರೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರಾಜು ಬಿನ್ ಮುನೆಪ್ಪ, ಬಲುವನಹಳ್ಳಿ ಗ್ರಾಮ, ಕೆ.ಜ.ಎಫ್ ತಾಲ್ಲೂಕು ರವರಿಗೂ ಮತ್ತು ಅದೇ ಗ್ರಾಮದ ವಾಸಿಯಾದ ಮುರಗೇಶ್ ರವರ ಮನೆಯವರಿಗೂ ಅಂಗಡಿಯಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದು, ದಿನಾಂಕ 27-10-2019 ರಂದು ಸಂಜೆ 4.00 ಗಂಟೆಯಲ್ಲಿ ದೂರುದಾರರು ಮತ್ತು ಆತನ ಹೆಂಡತಿ ಸರಸಮ್ಮ ರವರು ಮನೆಯ ಬಳಿ ಇದ್ದಾಗ, ಅಲ್ಲಿಗೆ ಬಂದ ಮುರಗೇಶ್ ರವರು ಏಕಾಏಕಿ ದೂರುದಾರರ ಮೇಲೆ ಜಗಳ ಮಾಡಿ ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ಗಾಯ ಗೊಳಿಸಿರುತ್ತಾನೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರುಕ್ಮಿಣಮ್ಮ ಕೊಂ ಮಸೆಪ್ಪ, ಗುಟ್ಟಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡನಾದ ಮಸೆಪ್ಪ ಬಿನ್ ಮುನಿಸ್ವಾಮಪ್ಪ, 65 ವರ್ಷ  ರವರು ದಿನಾಂಕ-15-02-2016 ರಂದು ಮದ್ಯಾಹ್ನ 2.00 ಗಂಟೆಗೆ ಸೀಮಹಸುಗಳ ವ್ಯಾಪಾರಕ್ಕೆ ಹೋಗುತ್ತೇನೆ ಅಂತ ಮನೆ ಬಿಟ್ಟು ಹೋದವನು ಮತ್ತೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *