ದಿನದ ಅಪರಾಧಗಳ ಪಕ್ಷಿನೋಟ 28ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:27.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಇತರೆ : 02

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ-27-02-2020 ರಂದು ಬೆಳಿಗ್ಗೆ 10.15 ಗಂಟೆಗೆ ಸಿ.ಹೆಚ್.ಸಿ ಶ್ರೀ ಕೋನಪ್ಪರೆಡ್ಡಿ ಮತ್ತು ಸಿ.ಹೆಚ್.ಸಿ ರಮೇಶ್ ರವರು ಗೀತಾ ರಸ್ತೆ, ಬೌವರಿಲಾಲ್ ಪೇಟೆ, ಎಂ.ಜಿ ಮಾರ್ಕೆಟ್ ಕಡೆ  ಗಸ್ತನ್ನು ನಿರ್ವಹಿಸುತ್ತಿದ್ದಾಗ, ದೊಡ್ಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಜಾನ್ಸನ್‌‌ ಬಿನ್ ಕದರಿವೇಲು, ನ್ಯೂ ಮಾಡೆಲ್ ಹೌಸ್, ಶಿವರಾಜ್ ನಗರ, ಇ.ಡಿ ಆಸ್ಪತ್ರೆ ಹತ್ತಿರ, ಕೆ.ಜಿ.ಎಫ್ ರವರು ಹೋಟಲ್ ನ ಮುಂಬಾಗದಲ್ಲಿ ಇಬ್ಬರು ವ್ಯಕ್ತಿಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕುಳಿತುಕೊಂಡು  ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಪ್ರಕರಣ ದಾಖಲಿಸಿ, ಸ್ಥಳದಲ್ಲಿದ್ದ  1) 02 ಪ್ಲಾಸ್ಟಿಕ್ ಲೋಟಗಳು, 2) 180 ಎಂ.ಎಲ್ ನ ಬೆಂಗಳೂರು ವಿಸ್ಕಿಯ 01 ಖಾಲಿ ಟೆಟ್ರಾ ಪಾಕೇಟ್, 3) 180 ಎಂ.ಎಲ್ ನ ಬೆಂಗಳೂರು ವಿಸ್ಕಿಯ 02 ಟೆಟ್ರಾ ಪ್ಯಾಕೇಟ್ ಗಳು. 4) 180 ಎಂ.ಎಲ್ ನ ನಂ-1 ಹೈವೇ ಪೈನ್ ವಿಸ್ಕಿಯ 01 ಟೆಟ್ರಾ ಪ್ಯಾಕೇಟ್. 4) 90 ಎಂ.ಎಲ್ ನ ಬೆಂಗಳೂರು ವಿಸ್ಕಿಯ 04 ಟೆಟ್ರಾಪಾಕೇಟ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ದಿನಾಂಕ 27-02-2020 ರಂದು ಬೆಳಿಗ್ಗೆ 10.50 ಗಂಟೆಗೆ ಸಿ.ಪಿ.ಸಿ ಶ್ರೀ.ನಂದೀಶ ಮತ್ತು ಸಿ.ಪಿ.ಸಿ ಮಂಜುನಾಥ ರವರು ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದು ಗಸ್ತನ್ನು ನಿರ್ವಹಿಸುತ್ತಿದ್ದಾಗ ಮೂಗನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶ್ರೀಮತಿ.ಕಣ್ಣಮ್ಮ ಕೋಂ. ರಾಮಕೃಷ್ಣಪ್ಪ ಎಂಬುವರು ಅಂಗಡಿ ಮುಂಬಾಗದಲ್ಲಿ ಮೂರು ವ್ಯಕ್ತಿಗಳಿಗೆ ಸಾರ್ವಜನಿಕ ರಸ್ತೆಯಲ್ಲಿ ಕುಳಿತುಕೊಂಡು  ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಪ್ರಕರಣ ದಾಖಲಿಸಿ, ಸ್ಥಳದಲ್ಲಿದ್ದ 1) 03 ಪ್ಲಾಸ್ಟಿಕ್ ಲೋಟಗಳು, 2) ಹೈವರ್ಡ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್ ನ ಮೂರು ಟೆಟ್ರಾ ಪಾಕೇಟ್ ಮತ್ತು 3) ಹೈವರ್ಡ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್ ನ  08 ಟೆಟ್ರಾ ಪ್ಯಾಕೇಟ್ ಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್ ಬಿನ್ ಈರಪ್ಪ, ಬಾವರಹಳ್ಳಿ ಗೇಟ್, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 27.02.2020 ರಂದು ಬೆಳಿಗ್ಗೆ 07-30 ಗಂಟೆಯಲ್ಲಿ  ಗ್ರಾಮದ ಗೇಟ್ ಬಳಿ ಇರುವ ತಂಗುದಾಣದ ಬಳಿ ಬಂದಾಗ, ಯಾರೋ ಒಬ್ಬ ಹೆಂಗಸು ವಯಸ್ಸು ಸುಮಾರು 45-50 ವರ್ಷ ವಯಸುಳ್ಳವರು ಚಪ್ಪಡಿ ಕಲ್ಲಿನ ಮೇಲೆ ಅಂಗಾತವಾಗಿ ಮಲಗಿದ್ದು, ಬಾಯಿಯಲ್ಲಿ ಬಿಳಿ ನೊರೆ ಬಂದಿದ್ದು ಮೃತಪಟ್ಟಿರುತ್ತಾಳೆ.

Leave a Reply

Your email address will not be published. Required fields are marked *