– ಸಾಧಾರಣ ಕಳ್ಳತನ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಯರಾಜ್ ಬಿನ್ ಕದೇರ್ವೇಲ್, ಗಣೇಶ್ಪುರಂ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ 02.10.2019 ರಂದು ರಾತ್ರಿ 11.00 ಗಂಟೆಗೆ ಹೊಂಡಾ ಡಿಯೋ ದ್ವಿಚಕ್ರ ವಾಹನ ಸಂಖ್ಯೆ KA 08,W 9112 ನ್ನು ಮನೆಯ ಮುಂದೆ ನಿಲ್ಲಿಸಿ ದಿನಾಂಕ 03.10.2019 ರಂದು ಬೆಳಿಗ್ಗೆ 5.00 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೋ ಕಳ್ಳರು 45000/- ರೂ ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಕಳುವುಮಾಡಿಕೊಂಡು ಹೋಗಿರುತ್ತಾರೆ.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್, ತಹಶೀಲ್ದಾರ್, ಕೆ.ಜಿ.ಎಫ್ ತಾಲ್ಲೂಕು ರವರು ನೀಡಿದ ದೂರಿನಲ್ಲಿ ಆರೋಪಿಯಾದ ಸರವಣಕುಮಾರ್ ಬಿನ್ ಗೋವಿಂದಸ್ವಾಮಿ, ಅಂಡ್ರಸನ್ ಪೇಟೆ, ಕೆ.ಜಿ.ಎಫ್ ರವರು ಮೂಲತಃ ತಮಿಳುನಾಡು ರಾಜ್ಯದ ವ್ಯಕ್ತಿಯಾಗಿದ್ದು, CONCORDIA HIGHER SECONDARY SCHOOL NETHAJI ROAD AMBUR VELLORE DISTRICT TAMILUNADU ಶಾಲೆಯಲ್ಲಿ ಎಸ್.ಎಲ್ ನಂ.65/1983-84, ADMISSION NO. 026/1982-83 ರಲ್ಲಿ ಆಂಗ್ಲ ಮಾದ್ಯಮದಲ್ಲಿ ವ್ಯಾಸಾಂಗ ಮಾಡಿರುವುದಾಗಿ, ತನ್ನ ಜನ್ಮ ದಿನಾಂಕ.25.09.1969 ಆಗಿರುವುದಾಗಿ, ತಾನು ನಾಯಕ ಜಾತಿಗೆ ಸೇರಿರುವುದಾಗಿ ಕೆ.ಜಿ.ಎಫ್ ನಾಡ ಕಛೇರಿಯಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ದಿನಾಂಕ.27.06.2014 ರಂದು ಎಸ್.ಟಿ. ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ.
ದಿನಾಂಕ12.11.2019 ರಂದು ಕೆ.ಜಿ.ಎಫ್ ನಗರ ಸಭೆಯ ವಾರ್ಡ್ ನಂ.33 ಗೆ ಎಸ್.ಟಿ ಜನಾಂಗಕ್ಕೆ ನಗರ ಸಭೆ ಸದಸ್ಯರಾಗಿ ಸರ್ಕಾರ ಮೀಸಲು ನಿಗದಿ ಪಡೆಸಿದ್ದು, ಸದರಿ ಚುನಾವಣೆಯಲ್ಲಿ ಆರೋಪಿಯಾದ ಸರವಣಕುಮಾರ್ ರವರು ತಮಿಳುನಾಡು ರಾಜ್ಯದಲ್ಲಿ ವ್ಯಾಸಾಂಗ ಮಾಡಿರುವ ಟಿ.ಸಿ ಮತ್ತು ತಹಶೀಲ್ದಾರ್ ಕಛೇರಿಯಿಂದ ಈ ಹಿಂದೆ ಪಡೆದಿರುವ ಜಾತಿ ಪ್ರಮಾಣ ಪತ್ರ, ರೇಷನ್ ಕಾರ್ಡ್ ದಾಖಲೆಗಳನ್ನು ನೀಡಿ, ಎಸ್.ಟಿ. ಜಾತಿ ಪ್ರಮಾಣ ಪತ್ರವನ್ನು ದಿನಾಂಕ.24.10.2019 ರಂದು ಪಡೆದುಕೊಂಡು ವಾರ್ಡ್ ನಂ.33 ರಲ್ಲಿ ಎಸ್.ಟಿ ಮೀಸಲಾತಿಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಜಯಗೊಂಡಿರುತ್ತಾರೆ.
ಆರೋಪಿಯಾದ ಸರವಣಕುಮಾರ್ ರವರು ಮೂಲತಃ ಹಿಂದುಳಿದ ವರ್ಗಗಳ ಜಾತಿಗೆ ಸೇರಿದ ಕಮ್ಮನಾಯ್ಡು ಎಂಬ ಮೇಲ್ಜಾತಿಗೆ ಸೇರಿದ್ದು, ಇವರು ಕರ್ನಾಟಕ ರಾಜ್ಯದ ಕೆ.ಜಿ.ಎಫ್ ನಗರ ಸಭೆ ಚುನಾವಣೆಯ ವಾರ್ಡ್ ನಂ.33 ರಲ್ಲಿ ಪರಿಶಿಷ್ಠ ಪಂಗಡದವರಿಗೆ ನಗರ ಸಭೆ ಸದಸ್ಯರಿಗೆ ಸರ್ಕಾರ ಮೀಸಲು ನಿಗದಿ ಮಾಡಿದ್ದು, ಸೌಲಭ್ಯಗಳನ್ನು ಪಡೆಯುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ, ಅಸಲಿ ದಾಖಲೆಗಳೆಂದು ಅಪ್ರಾಮಾಣಿಕವಾಗಿ ರೆವಿನ್ಯೂ ಅಧಿಕಾರಿಗಳಿಗೆ ನಂಬಿಸಿ, ಎಸ್.ಟಿ. ಜಾತಿ ಪ್ರಮಾಣ ಪತ್ರ ಪಡೆದು ಕೆ.ಜಿ.ಎಫ್. ನಗರ ಸಭೆ ವಾರ್ಡ್ ನಂ 33 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಗರ ಸಭೆ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆಂದು, ಈ ವಿಚಾರವಾಗಿ ಆರೋಪಿ ಸರವಣಕುಮಾರ್ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿರುವ ದೂರು.