ದಿನದ ಅಪರಾಧಗಳ ಪಕ್ಷಿನೋಟ 28ನೇ ಡಿಸೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 27.12.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ಶರಣಯ್ಯ, ಕೆ.ಎಸ್.ಆರ್‍.ಟಿ.ಸಿ ಬಸ್ ಚಾಲಕ ರವರು ದಿನಾಂಕ:-26.12.2020 ರಂದು ಬಸ್ ಸಂಖ್ಯೆ ಕೆಎ-07-ಎಫ್ -1838 ಕೆ.ಜಿ.ಎಫ್ -ವೇಲೂರು ಕರ್ತವ್ಯಕ್ಕೆ ನೇಮಿಸಿದ್ದು, ದಿನಾಂಕ:-27.12.2020 ರಂದು ಬೆಳಗ್ಗೆ 10:15 ಗಂಟೆಯಲ್ಲಿ ಬೇತಮಂಗಲ-ವಿ.ಕೋಟ ಮುಖ್ಯ ರಸ್ತೆ ಪೂಗಾನಹಳ್ಳಿ ಗ್ರಾಮದ ಗೇಟ್ ಸಮೀಪ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ವಿ.ಕೋಟ ಕಡೆಯಿಂದ ಬಂದ ದ್ವಿಚಕ್ರವಾಹನ ಸಂಖ್ಯೆ ಕೆ.ಎ-03-ಕೆಸಿ-2068 ರ ಸವಾರ  ಹಿಂಬದಿಯಲ್ಲಿ ಒಬ್ಬ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಗಳನ್ನು ನೀಡದೆ ಪೂಗಾನಹಳ್ಳಿ ಕಡೆಗೆ ವಾಹನವನ್ನು ತಿರುಗಿಸಿ ಬಸ್ ನ ಭಾಗದಲ್ಲಿ ಡಿಕ್ಕಿ ಪಡಿಸಿ ದ್ವಿಚಕ್ರವಾಹನದ ಸಮೇತ ಕೆಳಗೆ ಬಿದಿದ್ದು,  ದ್ವಿಚಕ್ರವಾಹನ ಸವಾರನಿಗೆ ಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *