ದಿನದ ಅಪರಾಧಗಳ ಪಕ್ಷಿನೋಟ 28ನೇ ನವೆಂಬರ್‍ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಕ 27.11.2020 ರಂದು ಸಂಜೆ 5.00  ಗಂಟೆಯಿಂದ ದಿನಾಂಕ 28.11.2020 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ರಸ್ತೆ ಅಪಘಾತಗಳು : 01

ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 27.11.2020 ರಂದು ಸಂಜೆ ಸುಮಾರು 6-10 ಗಂಟೆಗೆ ಈ ಕೇಸಿನ ಪಿರ್ಯಾದಿಯ ಜಯಪ್ಪ, ನತ್ತಬೆಲೆ ಗ್ರಾಮ, ಬಂಗಾರಪೇಟೆ ರವರು ತನ್ನ ದ್ವಿ ಚಕ್ರದಲ್ಲಿ ತನ್ನ ತಾಯಿಯಾದ ತಾಯಮ್ಮ ರವರನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ತನ್ನ ಮಾವನ ಮಗನ ಆರತಕ್ಷತೆಗೆ ಬಲ್ಲಗೇರಿಗೆ  ಹೋಗಲು ಚಾಂಪಿಯನ್ ರೀಪ್ಸ ಸರಹದ್ದು ಡಿ.ಎ.ಆರ್ ಹಳೆ ಪೊಲೀಸ್ ಕ್ವಾಟ್ರಸ್ ಪಕ್ಕದ ಥಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರ ಎದುರುಗಡೆಯಿಂದ ಯಾವುದೋ ಒಂದು ಟೆಂಪೋವಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿಯ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಅವರ ತಾಯಿ ವಾಹನ ಸಮೇತ ಪಕ್ಕದ ಹಳ್ಳದಲ್ಲಿ ಬಿದ್ದಿರುತ್ತಾರೆ.  ಈ ಅಪಘಾತದಲ್ಲಿ ಪಿರ್ಯಾದಿಯ ಎದೆಯ ಮೇಲೆ, ಮೊಣಕಾಲಿನ ಕೆಳಗೆ ಪಾದದ ಬಳಿ ರಕ್ತ ಗಾಯಗಳಾಗಿರುತ್ತೆ ಮತ್ತು ಪಿರ್ಯಾದಿಯ ತಾಯಿಯವರಿಗೂ ಕೂಡ ಬಲ ಭುಜ ಮತ್ತು ಬಲ ಭಾಗದ ಪಕ್ಕೆಲುಬುಗಳಿಗೆ ತಗುಲಿ ನೋವುಂಟಾಗಿರತ್ತೆ. ಪಿರ್ಯಾದಿಯ ವಾಹನಕ್ಕೆ ಡಿಕ್ಕಿ ಪಡಿಸಿದ  ಟೆಂಪೋ ವಿನ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ, ಕತ್ತಲಾಗಿದ್ದರಿಂದ ಟೆಂಪೋವಿನ ಸಂಖ್ಯೆ ಮತ್ತು ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ.

Leave a Reply

Your email address will not be published. Required fields are marked *