ದಿನದ ಅಪರಾಧಗಳ ಪಕ್ಷಿನೋಟ 28ನೇ ಅಕ್ಟೋಬರ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 27.10.2020 ರಂದುಸಂಜೆ 5.00 ಗಂಟೆಯಿಂದದಿನಾಂಕ 28.10.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.

ರಸ್ತೆ ಅಪಘಾತಗಳು : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿರುತ್ತದೆ.

       ದಿನಾಂಕ 26.10.2020 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರಾದ ಶ್ರೀ. ವೆಂಕಟೇಶಪ್ಪ ಮಾದಮಂಗಲ ಗ್ರಾಮ ಬಂಗಾರಪೇಟೆ ರವರ ಮಗನಾದ ಆನಂದ್, ೨೪ ವರ್ಷ ರವರು ಹಸುಗಳಿಗೆ ಬೂಸಾ, ಹಿಂಡಿಯನ್ನು ತರಲು ದ್ವಿಚಕ್ರ ವಾಹನ ಹೀರೋಹೋಂಡಾ ಸ್ಪ್ಲೆಂಡರ್ ಪ್ಲಸ್ ಸಂಖ್ಯೆ ಕೆಎ-08-ಡಬ್ಲ್ಯೂ-0225 ನ್ನು ಚಲಾಯಿಸಿಕೊಂಡು ಮಾದಮಂಗಲದಿಂದ ಬಂಗಾರಪೇಟೆಗೆ ಹೋಗಲು ದೊಡ್ಡ ಅಂಕಂಡಹಳ್ಳಿ ಕೆರೆ ಕಟ್ಟೆಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ ಕೆಎ-08-ಡಬ್ಲ್ಯೂ-9367 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಆನಂದ್ ರವರ ದ್ವಿಚಕ್ರ ವಾಹನಕ್ಕೆ ಎದುರಾಗಿ ಡಿಕ್ಕಿಹೊಡೆದ ಪರಿಣಾಮ, ಆನಂದ್ ರವರು ವಾಹನ ಸಮೇತ ಕೆಳಗೆ ಬಿದ್ದಾಗ, ತಲೆಯಲ್ಲಿ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತದೆ. ಆರೋಪಿಯು ಡಿಕ್ಕಿಪಡಿಸಿ ದ್ವಿಚಕ್ರ ವಾಹನದ ಸಮೇತ ಪರಾರಿಯಾಗಿರುತ್ತಾನೆ.

ದಿನಾಂಕ 21.10.2020 ರಂದು ಬೆಳಿಗ್ಗೆ ಸುಮಾರು 8.20 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ನವೀನ್ ಕುಮಾರ್‍, ೪೩ ವರ್ಷ, ಮಾದಯ್ಯ ರಸ್ತೆ, ಬಂಗಾರಪೇಟೆ ರವರು ತಮ್ಮ ಹೆಂಡತಿ ಪುಷ್ಪ ರವರೊಂದಿಗೆ ತಮ್ಮ ದ್ವಿಚಕ್ರ ವಾಹನ ಆಕ್ಸಿಸ್ ಕೆಎ-51-ಹೆಚ್-.ಬಿ-5379 ರಲ್ಲಿ ಚೋಳಘಟ್ಟ ಕಡೆಯಿಂದ ಬಂಗಾರಪೇಟೆಗೆ ಬರಲು ದೊಡ್ಡ ಅಂಕಂಡಹಳ್ಳಿ ಗ್ರಾಮದ ಕೆರೆಕಟ್ಟೆ ಮೇಲೆ ರಸ್ತೆಯ ಎಡಭಾಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ, ಬಂಗಾರಪೇಟೆ ಕಡೆಯಿಂದ ದ್ವಿಚಕ್ರ ವಾಹನ ಯಮಹ ಸಿಗ್ನಸ್ ರೇ ಜಡ್ ಸಂಖ್ಯೆ ಕೆಎ-08-ವೈ-2053 ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ಪಿರ್ಯಾದಿ & ಪುಷ್ಪ ಇಬ್ಬರೂ ವಾಹನ ಸಮೇತ ಕೆಳಗೆ ಬಿದ್ದು ರಕ್ತಗಾಯಗಳಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರಾದ ಶ್ರೀಮತಿ ಚಂದ್ರಮ್ಮ, ಚಾಂದ್‌ಲೈನ್ ಬಂಗಾರಪೇಟೆ ರವರು ಮೂರು ದಿನಗಳ ಹಿಂದೆ ಹೊಸಕೋಟೆಯ ಬಳಿಯಿರುವ ತನ್ನ ಮಗಳಾದ ವಿಜಯಲಕ್ಷ್ಮಿ ಎಂಬುವರ ಮನೆಗೆ ಹೋಗಿ ದಿನಾಂಕ 27.10.2020 ರಂದು ತನ್ನ ಮನೆಗೆ ಬಂದು ನೋಡಲಾಗಿ ಮನೆಯಲ್ಲಿನ ಸೋಫಾಸೆಟ್, ಬಟ್ಟೆಗಳು ಹಾಗೂ ಇತರೆ ಗೃಹೋಪಯೋಗಿ ವಸ್ತುಗಳು ಬೆಂಕಿಯಿಂದ ಸುಟ್ಟುಹೋಗಿದ್ದು, ಮನೆಯಲ್ಲಿದ್ದ ತನ್ನ ಮಗ ಮಂಜುನಾಥ @ ಮಂಜುನಾಥಚಾರಿ, ೩೦ ವರ್ಷ ರವರ ಮುಖದ ಮೇಲೆ, ಮೈಮೇಲೆ, ಕೈಗಳ ಮೇಲೆ ಬೆಂಕಿಯಿಂದ ಸುಟ್ಟು ಗಾಯಗಳಾಗಿದ್ದು, ಮನೆಯಲ್ಲಿದ್ದ ಹಾಲ್ & ಕಿಚನ್ ಮಧ್ಯೆಭಾಗದಲ್ಲಿ ಬೋರಲಾಗಿ ಬಿದ್ದು ಮೃತಪಟ್ಟಿರುತ್ತಾನೆ. ಮೃತನ ಸಾವಿನಲ್ಲಿ ಅನುಮಾನವಿರುತ್ತದೆಂದು ದೂರುದಾರರು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *