ದಿನದ ಅಪರಾಧಗಳ ಪಕ್ಷಿನೋಟ 28ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 27.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 28.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಇತರೆ01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ನಾಶಪಡಿಸಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.ರಾಜ್‌ಗೋಪಾಲ್‌ ಬಿನ್ ಕಳ್ಯಪ್ಪ, ಕನಮನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ರವಿಕುಮಾರ್ ಬಿನ್ ವೆಂಕಟೇಶಪ್ಪ ರವರ ಕುಟುಂಬದವರಿಗೆ ದಿನಾಂಕ 23.09.2020 ರಂದು ಸಂಜೆ 4.00 ಗಂಟೆಗೆ ಗಲಾಟೆಯಾಗಿದ್ದು, ಇದನ್ನು ಮನಸ್ಸಿನಲ್ಲಿಕೊಂಡು  1.ರವಿಕುಮಾರ್, 2.ವೆಂಕಟೇಶಪ್ಪ, 3.ರಾಜಪ್ಪ, 4.ಮುರುಗೇಶನ್, 5.ನಾಗೇಶ್ ರಾವ್, 6.ಬ್ಯಾಟರಾಯಪ್ಪ, 7.ಸುರೇಶ್, 8.ನವೀನ್, 9. ತಿಮ್ಮರಾಯಪ್ಪ ರವರು ದೂರುದಾರರ ಜಮೀನಿಗೆ ಹೋಗಿ ತೋಟದಲ್ಲಿದ್ದ ಟೊಮೋಟೋ ಬೆಳೆಯ ಪಸಲು ಗಿಡ ಸಮೇತ ಕಿತ್ತು ನಾಶ ಮಾಡಿ ಬೇಲಿಗೆ  ಬೆಂಕಿ ಹಚ್ಚಿ ಕೊಳವೆ ಬಾವಿಗೆ ಅಳವಡಿಸಿದ್ದ ಕಬ್ಬಿಣದ ಪೈಪುಗಳನ್ನು ಕಿತ್ತು ಎಸೆದು ಕೇಬಲ್ ಹಾಗೂ ಪ್ಯಾನಲ್ ಬೋರ್ಡ್ ಗಳನ್ನು ಕಳವು ಮಾಡಿಕೊಂಡು ಹೋಗಿ ಪಿವಿಸಿ ಪೈಪುಗಳನ್ನು ಕಿತ್ತುಹಾಕಿರುತ್ತಾರೆ.

 

Leave a Reply

Your email address will not be published. Required fields are marked *