ದಿನದ ಅಪರಾಧಗಳ ಪಕ್ಷಿನೋಟ 28ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 27.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಸ್ವಾಭಾವಿಕ ಮರಣ ಪ್ರಕರಣ :  02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಪ್ಪ, ಸಿ.ಪಿ.ಸಿ, ಬಂಗಾರಪೇಟೆ ಪೊಲೀಸ್ ಠಾಣೆ ರವರು ದಿನಾಂಕ 27.08.2020 ರಂದು ರಾತ್ರಿ 8.30 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಬಂಗಾರಪೇಟೆ ಪಟ್ಟಣದಲ್ಲಿರುವ ಜೂನಿಯರ್ ಕಾಲೇಜು ಬಳಿ ಸುಮಾರು 50 ರಿಂದ 55 ವರ್ಷ ವಯಸ್ಸುಳ್ಳ ಯಾರೋ ಒಬ್ಬ ಅನಾಮಧೇಯ ಗಂಡಸು, ಮೃತಪಟ್ಟಿದ್ದು, ಎತ್ತರ ಸುಮಾರು 5.6 ಅಡಿಗಳು, ಕಪ್ಪು ಕೂದಲು, ಬಲಗಾಲು ಮತ್ತು ಎಡಗೈಗೆ ಕುಷ್ಟರೋಗ ಗಾಯದ ಗುರ್ತು ಇರುತ್ತದೆ. ಒಂದು ತುಂಬು ತೋಳಿನ ನೀಲಿ ಬಣ್ಣದ ಷರ್ಟು, ಸಿಮೆಂಟ್ ಬಣ್ಣದ ಪ್ಯಾಂಟ್ ಇರುತ್ತದೆ. ಈತನಿಗೆ ವಯಸ್ಸಾಗಿದ್ದು, ಸರಿಯಾದ ಆಶ್ರಯವಿಲ್ಲದೇ, ಸಮಯಕ್ಕೆ ಸರಿಯಾಗಿ ಊಟ ಸಿಗದೇ, ಕುಷ್ಟರೋಗರಿಂದ ಅಥವಾ ವಿಪರೀತ ಚಳಿಯಿಂದ ಬಳಲಿ ಮೃತಪಟ್ಟಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪದ್ಮಮ್ಮ, ಐಸಂದ್ರ ಮಿಟ್ಟೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ  ಚೌಡಪ್ಪ, 45 ವರ್ಷ ರವರು  ದಿನಾಂಕ 26-08-2020 ರಂದು  ಬೆಳಿಗ್ಗೆ 10.00 ಗಂಟೆಗೆ  ಕುರಿಗಳನ್ನು ಮೇಯಿಸಿಕೊಂಡು  ಕರಿಯಪ್ಪನ ಕುಂಟೆಯಲ್ಲಿ  ಕೈ ತೊಳೆಯಲು  ಅಥವಾ  ಇನ್ನಾವುದೋ  ಕೆಲಸಕ್ಕೆ ನೀರಿನಲ್ಲಿ  ಇಳಿದು ಆಕಸ್ಮಿಕವಾಗಿ  ನೀರಿನಲ್ಲಿ  ಮುಳಗಿ ಮೃತ ಪಟ್ಟಿರುತ್ತಾರೆ.

Leave a Reply

Your email address will not be published. Required fields are marked *