ದಿನದ ಅಪರಾಧಗಳ ಪಕ್ಷಿನೋಟ 28ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ  27.07.2020 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ :  01

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜೋಸೆಫ್ ಬಿನ್ ಭಾಗ್ಯನಾಧನ್‌, ಸಿ ಟೈಲ್‌ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರು ದಿನಾಂಕ:26.07.2020 ರಂದು ಸಂಜೆ 7.00 ಗಂಟೆಯಲ್ಲಿ ತನ್ನ ಮನೆಯ ಹತ್ತಿರದ ಹುಣಸೆ ಮರದ ಕೆಳಗೆ ಹಾಕಿರುವ ಚಪ್ಪಡಿ ಕಲ್ಲಿನ ಮೇಲೆ ನಿಕೋಲಸ್,ಅರುಣ್ ಮತ್ತು ಜಾನ್ ಬೋಸ್ಕೊ ರವರೊಂದಿಗೆ ಕುಳಿತು ಮಾತನಾಡುತ್ತಿದ್ದಾಗ, ಡಿ ಬ್ಲಾಕ್ ವಾಸಿ ರಾಮು ಎಂಬಾತ ದೂರುದಾರರ ಬಳಿಗೆ ಬಂದು ನೀವು ಇಲ್ಲಿ ಏನು ಮಾಡುತ್ತಿದ್ದೀರಾ, ಎಂದು ಹೇಳಿ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದ್ದು, ಜಾನ್ ಬೋಸ್ಕೊ ರವರನ್ನು ಸಹ ಕೈಗಳಿಂದ ಹೊಡೆದು, ಪ್ರಾಣ ಬೆದರಿಕೆ ಹಾಕಿರುತ್ತಾನೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಎಂ. ವೆಂಕಟೇಶ್‌ ಬಿನ್ ನಾಗಯ್ಯ, ಓಲ್ಡ್‌ ಪೋಸ್ಟ್‌ ಆಫೀಸ್‌ ರಸ್ತೆ, ಆಂದ್ರ ಲೈನ್‌,  ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ನೀಡಿದ ದೂರಿನಲ್ಲಿ, ಆಂಡ್ರಸನ್ ಪೇಟೆ ಯಲ್ಲಿ ಸುಮಾರು ದಿನಗಳಿಂದ ಸುಮಾರು 40 ರಿಂದ 45 ವರ್ಷ ವಯಸ್ಸಿನ ಒಬ್ಬ ವ್ಯಕ್ತಿಯು ಒಬ್ಬನೆ ಅಲ್ಲಲ್ಲಿ ಓಡಾಡುತ್ತಿದ್ದು,  ದಿನಾಂಕ 26.07.2020 ರಂದು ರಾತ್ರಿ ಬಿದ್ದ ಮಳೆ ಹನಿಗಳಿಗೆ ಮತ್ತು ಚಳಿಯಿಂದ ಸದರಿ ವ್ಯಕ್ತಿಯು ಮೃತಪಟ್ಟಿರಬಹುದೆಂದು ದೂರು.

Leave a Reply

Your email address will not be published. Required fields are marked *