ದಿನದ ಅಪರಾಧಗಳ ಪಕ್ಷಿನೋಟ 27 ನೇ ಮೇ 2019

ಅಸ್ವಾಭಾವಿಕ ಮರಣ ಪ್ರಕರಣ : 02

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕಣ ದಾಖಲಾಗಿರುತ್ತದೆ. ದಿನಾಂಕ.26.05.2019 ರಂದು  ದೂರುದಾರರಾದ ಶ್ರೀಮತಿ ಶಿವಶಂಕರಿ ನಂ 193 ಬಿ ಬ್ಲಾಕ್‌ ಚಾಂಪಿಯನ್‌ರೀಫ್ಸ್‌ ರವರು ನೀಡಿದ ದೂರಿನಲ್ಲಿ ದೂರುದಾರರ ತಮ್ಮನಾದ ದಿಲೀಪ್ ಕುಮಾರ್ ವಯಸ್ಸು 30 ವರ್ಷರವರಿಗೆ  ಹೊಟ್ಟೆ & ಬೆನ್ನು ನೋವಾಗುತ್ತಿದೆಯೆಂದು ಹೇಳಿದ್ದು,  ಕೆ.ಜಿ.ಎಫ್ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದಾಗ ಪಿಟ್ಸ್  ಹಾಗೂ  ಹೃದಯಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ  ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಆಂಡ್ರಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕಣ ದಾಖಲಾಗಿರುತ್ತದೆ. ದಿನಾಂಕ 26.05.2019 ರಂದು  ದೂರುದಾರರಾದ ಶ್ರೀ  ಕೃಷ್ಣಪ್ಪ ಚಾರಲಕುಪ್ಪಪಾಳ್ಯ ಪುಂಗನೂರು  ಅಂದ್ರಪ್ರದೇಶ ರವರು ನೀಡಿದ ದೂರಿನಲ್ಲಿ ಸುರೇಶ್ 28ವರ್ಷ ರವರು ಅಂಜನೇಯರೆಡ್ಡಿ ಸೋನೆಪಲ್ಲಿ ಗ್ರಾಮ  ರವರ ಕೋಳಿಪಾರಂ ನಲ್ಲಿ  02 ತಿಂಗಳಿನಿಂದ ಕೂಲಿ ಕೆಲಸ ಮಾಡುತ್ತಿದ್ದು ಆತನ ಹೆಂಡತಿ ಸುರೇಶ್‌ ರವರು ಬಿಟ್ಟು ಹೋಗಿರುವ ಕಾರಣ  ಜೀವನದಲ್ಲಿ ಜಿಗುಪ್ಸೆ ಮಾಡಿಕೊಂಡು  ಕೋಳಿ ಫಾರಂನ ರೂಂ ನಲ್ಲಿ ಸಿಮೆಂಟ್ ಶೀಟ್ ನ ಮೇಲೆ ಛಾವಣಿಯ ಕಬ್ಬಿಣದ ಪೈಪಿಗೆ ಸೀರೆಯಿಂದ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ

Leave a Reply

Your email address will not be published. Required fields are marked *