ದಿನದ ಅಪರಾಧಗಳ ಪಕ್ಷಿನೋಟ 27 ನೇ ಅಕ್ಟೋಬರ್‌ 2019

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾ ಶ್ರೀ. ಪ್ರಶಾಂತ್‌ ಬಿನ್ ವೆಂಕಟರಮಣ, ಕೀಲುಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 22.10.2019 ರಂದು ಸಂಜೆ 5-00 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.08 ಡಬ್ಲೂ-4971 ರಲ್ಲಿ ಹಿಂಭಾಗ ಅಕ್ಕನ ಮಗನಾದ ದೇವರಾಜ, 12 ವರ್ಷ ರವರನ್ನು ಕುಳ್ಳರಿಸಿಕೊಂಡು ಬಂಗಾರಪೇಟೆ ಕಾಮಸಮುದ್ರಂ ರಸ್ತೆ ದೇಶಿಹಳ್ಳಿ ಗ್ರಾಮ ಹಾಲಿನ ಡೈರಿ ಮುಂಭಾಗ ಹೋಗುತ್ತಿದ್ದಾಗ, ಹಿಂದುಗಡೆಯಿಂದ ಆರೋಪಿ ಟ್ರಾಕ್ಟರ್ ಸಂಖ್ಯೆ ಕೆ.ಎ40 ಟಿ.ಎ-1131 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನವನ್ನು ಬಳಸಿಕೊಂಡು ಮುಂದೆ ಹೋದಾಗ ಟ್ರಾಕ್ಟರ್ ದ್ವಿಚಕ್ರ ವಾಹನಕ್ಕೆ ತಾಕಿ ದೂರುದಾರರು ಮತ್ತು ದೇವರಾಜ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ಟ್ರಾಕ್ಟರ್ ದೇವರಾಜ ರವರ ಎರಡೂ ಕಾಲುಗಳ ಮೇಲೆ ಹರಿದು ರಕ್ತಗಾಯಗಳಾಗಿರುತ್ತೆ. ಆರೋಪಿಯು ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತೇನೆ.

 

– ಅಕ್ರಮ ಮದ್ಯ ಮಾರಾಟ :  01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂದಿಸಿ ಪ್ರಕರಣದ ದಾಖಲಾಗಿರುತ್ತದೆ. ದಿನಾಂಕ:26.10.2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಉರಿಗಾಂ ನ ಹೆನ್ರೀಸ್ 1 ನೇ ಲೈನಿನಲ್ಲಿ ಸುಮತಿ ಎಂಬುವರು ಒಂದು ಪ್ಲಾಸ್ಟಿಕ್ ಚೀಲದಲ್ಲಿ LEGACY XXX RUM, 27 ಮದ್ಯದ ಪೌಚ್ ಗಳನ್ನು ಹಾಗೂ ಮತ್ತೊಂದು ಪ್ಲಾಸ್ಟಿಕ್ ಚೀಲದಲ್ಲಿ N0 1 HIGHWAY FINE WHISKY, 26 ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದವರ ಮೇಲೆ ಶ್ರೀ. ದೇವಕುಮಾರ್‌, ಎ.ಎಸ್.ಐ ರವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಡಾ|| ಶಿವಕುಮಾರ್‌, ವೈದ್ಯಾಧಿಕಾರಿಗಳು, ಸರ್ಕಾರಿ ಆಸ್ಪತ್ರೆ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು  ದಿನಾಂಕ. 26.10.2019 ರಂದು ಮಧ್ಯಾಹ್ನ 3:00 ಗಂಟೆಯಲ್ಲಿ ಆಸ್ವತ್ರೆಯಲ್ಲಿದ್ದಾಗ, ಯಾರೋ ಒಬ್ಬ ಗಂಡಸು ಸುಮಾರು 35 ರಿಂದ 40 ವರ್ಷ ವಯಸ್ಸಾದವರು ಮೆಟರ್ನಿಟಿ ಆಸ್ವತ್ರೆಯ ಹಳೆಯ ಬಿಲ್ದಿಂಗ್ ನಲ್ಲಿ ಮೃತಪಟ್ಟಿರುವುದಾಗಿ ನೀಡಿರುವ ದೂರು.

Leave a Reply

Your email address will not be published. Required fields are marked *