ದಿನದ ಅಪರಾಧಗಳ ಪಕ್ಷಿನೋಟ 27 ನೇ ಸೆಪ್ಟೆಂಬರ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:26.09.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಹಲ್ಲೆ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುನೀಲ್‌ ಕುಮಾರ್‌ ಬಿನ್ ಮನೋಗರನ್, ಸಂಜಯ್‌ಗಾಂಧಿ ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಅತ್ತೆಯಾದ ಮುನಿ ರವರು ದಿನಾಂಕ.25.09.2019 ರಂದು ತೀರಿಕೊಂಡಿದ್ದರಿಂದ ಸಂಜೆ 5-30 ಗಂಟೆಗೆ ಅಂತ್ಯ ಸಂಸ್ಕಾರಕ್ಕೆ ಮೃತದೇಹವನ್ನು ಸಾಗಿಸಿಕೊಂಡು ಹೊಸ ಬಸ್ಸ್ ನಿಲ್ದಾಣದ ಮುಂದೆ ದೂರುದಾರರು ಶವದ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿಗಳಾದ ನಾಗರಾಜ್, ವಸಂತ್ ಮತ್ತು  ಸುಬ್ರಮಣಿ ರವರು ಶವದ ಮುಂದಿನ ಬ್ಯಾಂಡ್ ನ ಬಳಿ ಡ್ಯಾನ್ಸ್ ಮಾಡುತ್ತಾ ಅಜೀತ್ ಮೇಲೆ ಬಿದ್ದಾಗ, ದೂರುದಾರರು ಪಕ್ಕಕ್ಕೆ ತಳ್ಳಿದಾಗ ಆರೋಪಿಗಳು ಕೆಟ್ಟಮಾತುಗಳಿಮದ ಬೈದು, ಚಾಕು ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪದ್ಮಾ ಕೊಂ ವೆಂಕಟೇಶ್‌ಮೂರ್ತಿ, ಚಿಂತಗುಮ್ಮನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರಿಗೂ ಮತ್ತು ನಾರಾಯಣಪ್ಪ, ಗೌರಮ್ಮ ರವರಿಗೂ ಜಮೀನಿನ ವಿಚಾರದಲ್ಲಿ ವಿವಾದವಿದ್ದು, ದಿನಾಂಕ 25.09.2019 ರಂದು ಸಂಜೆ 4-00 ಗಂಟೆಗೆ ದೂರುದಾರರು ಹುರಳಿ ಬಿತ್ತನೆ ಮಾಡಲು ಜಮೀನಿನ ಬಳಿ ಹೋದಾಗ ನಾರಾಯಣಪ್ಪ ಮತ್ತು ಗೌರಮ್ಮ ರವರು ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು ದೊಣ್ಣೆಯಿಂದ  ಹೊಡೆದು ಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *