ದಿನದ ಅಪರಾಧಗಳ ಪಕ್ಷಿನೋಟ 27ನೇ ಮಾರ್ಚ್ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 26.03.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಸಾಧಾರಣ ಕಳ್ಳತನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಂದ್ರಕಾಂತ್ ಬಿನ್ ಸೀನಪ್ಪ, ಕುಪ್ಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ: 14/03/2018 ರಂದು ರಾತ್ರಿ 8.00 ಗಂಟೆಯಲ್ಲಿ ಬಂಗಾರಪೇಟೆ ಮುಖ್ಯ ರಸ್ತೆಯಲ್ಲಿರುವ ಆರ್.ಎಂ.ಸಿ. ಚೆಕ್ ಪೋಸ್ಟ್ ಮುಂಭಾಗ ಹೀರೋ ಸ್ಲೆಂಡರ್ ದ್ವಿಚಕ್ರ ವಾಹನ ನೊಂದಣಿ ಸಂಖ್ಯೆ: ಕೆ.ಎ.08-ಯು-6342 ನ್ನು ಪುಟ್ಪಾತ್ ಮುಂಭಾಗ ನಿಲ್ಲಿಸಿ ಅಂಗಡಿಯ ಬಳಿ ಹೋಗಿ ನಂತರ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು :‍ ‌01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ದಾಸನ್ ಬಿನ್ ಕೇಶವೇಲು, ಗೌತಮ್‌ನಗರ, ಕೆ.ಜಿ.ಎಫ್ ರವರು ದಿನಾಂಕ.26-03-2018 ರಂದು ಬೆಳಿಗ್ಗೆ 05-30 ಗಂಟೆಯಲ್ಲಿ ಹೆಂಡತಿ ಮೇರಿ  ರವರನ್ನು ಕಾರ್ ಸಂಖ್ಯೆ ಕೆ.ಎ.03-ಎಂ.ಕೆ.9079 ರಲ್ಲಿ ಕುಳ್ಳಿರಿಸಿಕೊಂಡು  ಆಲದಮರ-ಬೇತಮಂಗಲ ಮುಖ್ಯರಸ್ತೆ ಭಾರತ್ ನಗರ ಬಸ್ ನಿಲ್ದಾಣದ ಬಳಿ ಹೋಗುತ್ತಿರುವಾಗ ಹಿಂಬದಿಯಿಂದ ಬೊಲೇರೊ ಲಗ್ಗೇಜ್ ವಾಹನ ಸಂಖ್ಯೆ ಕೆ.ಎ.07-ಎ.4772 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಕಾರನ್ನು ಓವರ್ ಟೇಕ್ ಮಾಡಿ, ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರ ಕಾರು ಜಖಂಗೊಂಡಿರುತ್ತೆ.

 

 – ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಲ್ಲಾಪುರಿ ಬಿನ್ ಚಿನ್ನಪ್ಪ, ಅಡಂಪಲ್ಲಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರು  ದಿನಾಂಕ 25-03-2018 ರಂದು ಸಂಜೆ 5.00 ಗಂಟೆಯಲ್ಲಿ ತಮ್ಮ ರಾಜಪ್ಪನ್ನು ಅಡಂಪಲ್ಲಿ ಯಲ್ಲಿ ಬೈಯುತ್ತಿದ್ದಾಗ, ಆರೋಪಿ ಸುಬ್ರಮಣಿ ರವರು ನನ್ನನ್ನು ಬೈಯುತ್ತಿದ್ದೀಯ ಎಂದು ಜಗಳಕ್ಕೆ ಬಂದು ದೂರುದಾರರನ್ನು ಕೆಟ್ಟ ಮಾತುಗಳಿಂದ ಬೈದು ಕಲ್ಲಿನಿಂದ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ.

-ಇತರೆ : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 26.03.2018 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಆರೋಪಿಗಳಾದ ಲಕ್ಷ್ಮೀನಾರಾಯಣ್ ಮೂರ್ತಿ ಮತ್ತು ವೆಂಕಟರಾಮ್‌ಶೆಟ್ಟಿ, ಕೆಂಪಾಪುರ ಗ್ರಾಮ ರವರು ಚಿಲ್ಲರೆ  ಅಂಗಡಿಯಲ್ಲಿ 1) 20 ಲೀಟರಿನ ಕ್ಯಾನಿನ ತುಂಬಾ ಡಿಸೇಲ್ 2) 35 ಲೀಟರಿನ ಕ್ಯಾನಿನಲ್ಲಿ ಅರ್ದ ಕ್ಯಾನ್ ಡಿಸೇಲ್ 3) 35 ಲೀಟರಿನ ಕ್ಯಾನಿನಲ್ಲಿ ಸುಮಾರು 10 ಲೀಟರ್ ಪೆಟ್ರೋಲ್ ಇಟ್ಟುಕೊಂಡು ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡುತ್ತಿದ್ದವರನ್ನು ಚಾಂಪಿಯನ್‌ರೀಫ್ಸ್‌ ಸಿ.ಪಿ.ಐ ಮುಸ್ತಾಕ್‌ ಪಾಷಾ ಮತ್ತು ಸಿಬ್ಬಂದಿಯವರು ದಾಳಿಮಾಡಿ ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ವೆಂಕಟಪ್ಪ, ಅತ್ತಿಗಿರಿಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗ ನಾಗೇಶ್ 26 ವರ್ಷ ಎಂಬುವರಿಗೆ ಸುಮಾರು 10 ವರ್ಷಗಳಿಂದ ಹೊಟ್ಟೆ ನೋವು ಬರುತ್ತಿದ್ದು, ಚಿಕಿತ್ಸೆ ಕೊಡಿಸಿದರು ವಾಸಿಗಯಾಗದೇ ಇದ್ದುದ್ದರಿಂದ  ದಿನಾಂಕ:26.03.2018 ರಂದು ರಾತ್ರಿ 6-30 ಗಂಟೆಯಲ್ಲಿ ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

 

Leave a Reply

Your email address will not be published. Required fields are marked *