ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 26.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹೆಂಗಸು ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 24.03.2021 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಸೆಂಧಿಲ್ ಅರಸನ್, ಸಿ.ಎ. ಬ್ಲಾಕ್, ಮಾರಿಕುಪ್ಪಂ ರವರ ಹೆಂಡತಿ ವಿಜಯ, ೨೭ ವರ್ಷ, ರವರು ಹಾಗೂ ತನ್ನ 5 ವರ್ಷದ ಮಗನೊಂದಿಗೆ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ಮತ್ತೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.
– ಅಬಕಾರಿ ಕಾಯ್ದೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಶ್ರೀ ನವೀನ್, ಪಿಎಸ್ಐ, ಬೇತಮಂಗಲ ಪೊಲೀಸ್ ಠಾಣೆ ರವರು ಮತ್ತು ಅವರ ಸಿಬ್ಬಂದಿಯೊಂದಿಗೆ ದಿನಾಂಕ:-26.03.2021 ರಂದು ಸಂಜೆ ಸುಮಾರು 7.15 ಗಂಟೆಯ ಸಮಯದಲ್ಲಿ, ಗುಟ್ಟಹಳ್ಳಿಕಡೆ ಗಸ್ತಿನಲ್ಲಿದ್ದಾಗ, ಆರೋಪಿ ಆದರ್ಶ್ ರೆಡ್ಡಿ, ಖಾದರಿಪುರ, ಮುಳಬಾಗಿಲು ರವರು ಬೇತಮಂಗಲ- ಮುಳಬಾಗಿಲು ಮುಖ್ಯ ರಸ್ತೆ ವೆಂಕಟಾಪುರ ಗ್ರಾಮದ ಬಳಿ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ, ಮದ್ಯಪಾನ ಸೇವನೆ ಮಾಡುತ್ತಿದ್ದು, ಸದರಿ ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸಿರುತ್ತದೆ.