ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಕ 26.11.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ರಸ್ತೆ ಅಪಘಾತಗಳು : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶಾನು ಕೊಂ ಅಲ್ಲಾಬಕಾಶ್, ಭಾರತೀಪುರಂ, ಆಂಡ್ರಸನ್ಪೇಟೆ, ಕೆ.ಜಿ.ಎಫ್ ರವರು ದಿನಾಂಕ 25.11.2020 ರಂದು ರಾತ್ರಿ 8.00 ಗಂಟೆಯಲ್ಲಿ ಆಂಡ್ರಸನ್ ಪೇಟೆ ಸರ್ಕಲ್ ಬಳಿ ನಿಂತಿದ್ದಾಗ, ಆಂಡ್ರಸನ್ ಪೇಟೆ ವೃತ್ತದ ಕಡೆಯಿಂದ ಆಟೋ ವಾಹನ ಸಂಖ್ಯೆ KA-02 B-9651 ರ ಚಾಲಕ ಗಿಲ್ಬರ್ಟ್, ಮಾರಿಕುಪ್ಪಂ ವಾಸಿ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರಿಗೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ ಗಾಯಗಳಾಗಿರುತ್ತದೆ.