ದಿನದ ಅಪರಾಧಗಳ ಪಕ್ಷಿನೋಟ 27ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 26.08.2020 ರಂದು ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ  ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಬರ್ನಾರ್ಡ್ ಬಿನ್ ಆಸೀರ್‌, ಮಸ್ಕಂ ಇ ಬ್ಲಾಕ್, ಸುಸೈಪಾಳ್ಯಂ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರು ಮತ್ತು ದೂರುದಾರರ ಏರಿಯಾದ  ವಾಸಿ ಸ್ಟಾಲೀನ್ ರವರು ದಿನಾಂಕ 25.08.2020  ರಂದು  ರಾತ್ರಿ 8.00 ಗಂಟೆಯಲ್ಲಿ  ಎಸ್.ಟಿ ಬ್ಲಾಕ್  ನಲ್ಲಿರುವ ಸ್ನೇಹಿತ ದೊರೆ  ರವರ   ಹುಟ್ಟುಹಬ್ಬದ  ಕಾರ್ಯಕ್ರಮಕ್ಕೆ  ಹೋಗಿ  ವಾಲಿಬಾಲ್ ಗ್ರೌಂಡ್ ನಲ್ಲಿ ಸ್ನೇಹಿತರೊಂದಿಗೆ ಕೇಕ್ ಕತ್ತರಿಸುತ್ತಿದ್ದಾಗ, ಅಲ್ಲಿಗೆ  ಅಪ್ಪು, ಸುರೇನ್, ಅಶೋಕ್, ವಿಕ್ಕಿ,  ಆಕಾಶ್ ಪ್ರಸನ್ನ ಕುಮಾರ್  @ ಪಾಂಬು ರವರುಗಳು ದ್ವಿ ಚಕ್ರ ವಾಹನಗಳಲ್ಲಿ ಬಂದು ದೂರುದಾರರ ಸ್ನೇಹಿತ ಸುನೋಜ್ ನ್ನು ಹಿಡಿದುಕೊಂಡು ದ್ವಿಚಕ್ರವಾಹನದಲ್ಲಿ ಕುಳಿತುಕೋಳ್ಳುವಂತೆ  ಬಲವಂತ ಮಾಡಿ, ಹೊಡೆದಿದ್ದು, ಸ್ಟಾಲೀನ್ ಅವರನ್ನು ಕುರಿತು “ಯಾಕೆ ಸುನೋಜ್ ನನ್ನು ಹೊಡೆಯುತ್ತಿದ್ದೀರಿ”  ಎಂದು ಕೇಳಿದಕ್ಕೆ “ಅವನನ್ನು  ಹೊಡೆದರೆ ನೀನು ಯಾಕೆ  ಅಡ್ಡ ಬರುತ್ತೀಯಾ ನಿನ್ನನ್ನು ನೋಡಿಕೊಳ್ಳುತ್ತೇವೆ” ಎಂದು ಗುರಾಯಿಸಿಕೊಂಡು ಅಲ್ಲಿಂದ ಹೊರಟು ಹೋಗಿದ್ದು, ನಂತರ  ದಿನಾಂಕ 26.08.2020 ರಂದು ರಾತ್ರಿ 7.30 ಗಂಟೆಗೆ ದೂರುದಾರರು ಮತ್ತು ಸ್ಟಾಲೀನ್  ರವರು ರಾಬರ್ಟ್ ಸನ್ ಪೇಟೆಯಿಂದ ದ್ವಿ ಚಕ್ರ ವಾಹನದಲ್ಲಿ  ಬರುತ್ತಿದ್ದಾಗ,  ಚಾಮರಾಜಪೇಟೆ  ಸರ್ಕಲ್ ನಲ್ಲಿರುವ  ಮೆಡಿಕಲ್ ಸ್ಟೋರ್  ಮುಂಭಾಗ ಸುರೇನ್, ಆಕಾಶ್, ಪ್ರಸನ್ನ ಕುಮಾರ್ @ ಪಾಂಬು ರವರು  ದ್ವಿಚಕ್ರ ವಾಹನದಲ್ಲಿ   ಪಿರ್ಯಾದಿದಾರರಿಗೆ  ಅಡ್ಡ ಬಂದು  ದೂರುದಾರರ  ದ್ವಿ ಚಕ್ರ ವಾಹನಕ್ಕೆ  ತಾಕಿಸಿ  ಬಿಳಿಸಿದ್ದು, ಅಗ ಅಲ್ಲಿಯೇ ಇದ್ದ ಅಪ್ಪು, ಶಬರೀಶ್ ಮತ್ತು ಸುರೇನ್ ರವರು ಕೈಗಳಲ್ಲಿ ಕತ್ತಿಗಳನ್ನು ಹಿಡಿದುಕೊಂಡು ಹೊಡೆಯಲು ಬಂದಿದ್ದು, ಆಗ ದೂರುದಾರರು ಮತ್ತು ಸ್ಟಾಲೀನ್ ರವರು  ತಪ್ಪಿಸಿಕೊಂಡು ಕೆ.ಎಸ್.ಆರ್.ಟಿ.ಸಿ  ಡಿಪೋ  ಕಡೆಗೆ ಓಡಿ ಹೋದಾಗ,  ಆರೋಪಿಗಳು ಅಟ್ಟಿಸಿಕೊಂಡು  ಹೋಗಿ  ಸ್ಟಾಲೀನ್  ರವರನ್ನು  ಕೆ.ಎಸ್.ಆರ್.ಟಿ.ಸಿ  ಡಿಪೋ ಬಳಿ ಇರುವ ನೀರಿನ ಓವರ್ ಹೆಡ್ ಟ್ಯಾಂಕ್ ಬಳಿ ಹಿಡಿದುಕೊಂಡು ಕತ್ತಿಗಳಿಂದ ಹೊಡೆದು ರಕ್ತಗಾಯಗಳನ್ನುಂಟುಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆಂಜನೇಯಶಿಟ್ಟಿ ಬಿನ್ ವೆಂಕಟರಾಮಯ್ಯಶೆಟ್ಟಿ, ಚಿನ್ನಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ವಾಣಿ, 19 ವರ್ಷ ರವರು ದಿನಾಂಕ: 23.08.2020 ರಂದು ರಾತ್ರಿ 7.30 ಗಂಟೆಯಲ್ಲಿ ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *